Tuesday, December 24, 2024

ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಸಾವು

ಬೆಂಗಳೂರು : ಭೀಕರ ಅಪಘಾತದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್​ ಸ್ಟಾರ್​ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುಟಾಣಿ ಹಾಗೂ ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡು ಅವರ  ಮೊಮ್ಮಗಳು ಸಮನ್ವಿಯ ದಾರುಣ ಸಾವಾಗಿದೆ.

ಅತಿ ವೇಗದಿಂದ ಬಂದು ಸ್ಕೂಟರ್​ಗೆ ಟಿಪ್ಪರ್ ಡಿಕ್ಕಿಯಾಗಿದೆ ತಾಯಿ ಜೊತೆ ಸ್ಕೂಟರ್​ನ ಹಿಂಬದಿ ಕುಳಿತಿದ್ದ ಆರು ವರ್ಷದ ಬಾಲಕಿ ಸಮನ್ವಿ(6) ಸಾವನಪ್ಪಿದ್ದಾಳೆ. ಮತ್ತು ತಾಯಿ ಅಮೃತ ನಾಯ್ಡು ವಾಹನ ಚಾಲನೆ ಮಾಡುತ್ತಿದ್ದರಿಂದ ಅವರಿಗೂ ಸಹ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಏನಿದು ಘಟನೆ ?

ಕನಕಪುರ ರಸ್ತೆಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿರುವ ಅಮೃತಾ ನೆನ್ನೆ ಸಂಜೆ 4.30ರ ವೇಳೆ ತನ್ನ ಮಗಳೊಂದಿಗೆ ಮನೆಯಿಂದ ಸ್ಕೂಟಿಯಲ್ಲಿ ಹೊರಟಿದ್ದಾರೆ. ಗಾಯತ್ರಿ ನಗರಕ್ಕೆ ಹೋಗಬೇಕಿದ್ದ ಅಮೃತ ನಾಯ್ಡು, ಸಮನ್ವಿ ವಾಜರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬೈಕ್ ಪಾರ್ಕ್ ಮಾಡಬೇಕಿತ್ತು. ಮೆಟ್ರೋ ನಿಲ್ದಾಣಕ್ಕೆ 100 ಮೀಟರ್ ಇರುವಂತೆಯೇ ಅಪಘಾತ ಸಂಭವಿಸಿದೆ. ಟಾಟ ಸುಮೋ ಮತ್ತು ಲಾರಿ ಮಧ್ಯೆ ತಾಯಿ- ಮಗಳು ಸಿಲುಕಿಕೊಂಡರು. ಈ ವೇಳೆ ಆಯತಪ್ಪಿ ತಾಯಿ ಅಮೃತನಾಯ್ಡು, ರಸ್ತೆಯ ಪಕ್ಕಕ್ಕೆ ಬಿದ್ದಿದ್ದರೆ, ಮಗಳು ಸಮನ್ವಿ ರಸ್ತೆಗೆ ಬಿದ್ದಿದ್ದಾಳೆ. ವೇಳೆ ಪಕ್ಕದಲ್ಲೇ ಬರ್ತಿದ್ದ ಲಾರಿ ಸಮನ್ವಿ ಮೇಲೆ ಹರಿದಿದೆ.

ಲಾರಿ ಚಾಲಕ ಕುಮಾರಸ್ವಾಮಿ ಅವರನ್ನು ಲೇಔಟ್ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಹಾಗೂ ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

RELATED ARTICLES

Related Articles

TRENDING ARTICLES