ವಿಜಯಪುರ : ಕೋವಿಡ್ ಸಂಖ್ಯೆಯಲ್ಲಿ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಮಹಾರಾಷ್ಟ್ರದ ಗಡಿ ಶಾಲೆಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಿಜಯಪುರ ಜಿಲ್ಲೆಯ ಗಡಿ ಭಾಗದಲ್ಲಿ 80 ಕ್ಕೂ ಅಧಿಕ ಶಾಲೆಗಳಿವೆ, ಈ ಭಾಗದ ಜನರು ಸಹ ಶಾಲೆ ಬಂದ್ ಮಾಡುವ ಬದಲಾಗಿ ಬೇರೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಮಹಾರಾಷ್ಟ್ರದ ಜನರು ಇಲ್ಲಿಗೆ ಆಗಮಿಸದಂತೆ ಕ್ರಮ ವಹಿಸಲು ಮನವಿ ಮಾಡಿದ್ದಾರೆ
ಮಹಾರಾಷ್ಟ್ರದಲ್ಲಿ ರೂಪಾಂತರಿ ಕೋವಿಡ್ ಮತ್ತು ಒಮಿಕ್ರಾನ್ ಆರ್ಭಟ ಹೆಚ್ಚಾಗುತ್ತಲೇ ಇದೆ. ಇದರಿಂದ ಗಡಿಭಾಗದ ಶಾಲೆಗಳಲ್ಲಿಯೂ ಆತಂಕ ಶುರುವಾಗಿದೆ. ವಿದ್ಯಾರ್ಥಿಗಳು, ಪೋಷಕರಲ್ಲಿ ದಿನೇ ದಿನೇ ಕೋವಿಡ್ ಭೀತಿ ಉಂಟಾಗುತ್ತಿದೆ. ಗಡಿಭಾಗದ ಶಾಲೆಗಳಿಗೆ ಇನ್ನೂ ರಜೆ ಘೋಷಣೆಯನ್ನು ಮಾಡದೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿಲ್ಲ ಎಂದು ಪೋಷಕರು ಜಿಲ್ಲಾಡಳಿತದ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಬಿಇಓ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮುಂದಾಗಿದೆ. ಸಭೆಯಲ್ಲಿ ಸೋಂಕಿನ ಪ್ರಮಾಣ ನೋಡಿ ಗಡಿಭಾಗದ ಶಾಲೆಗಳಿಗೆ ರಜೆ ಕೊಡುವುದರ ಬಗ್ಗೆ ನಿರ್ಧಾರಕ್ಕೆ ಬರಲಿದೆ ಜಿಲ್ಲಾಡಳಿತ.