Wednesday, January 22, 2025

ಕನ್ನಡ ಡೈರೆಕ್ಟರ್​​ಗೆ ಸ್ವೀಟಿಯಿಂದ ಬಂತಾ ಬುಲಾವ್.?

ಕಡಲ ತೀರದ ಸೊಬಗು.. ಟಾಲಿವುಡ್​ನಲ್ಲಿ ಅರಳಿದ ಸ್ವೀಟಿ ಅನುಷ್ಕಾ ಶೆಟ್ಟಿ, ಕನ್ನಡದ ಡೈರೆಕ್ಟರ್ ಜೊತೆ ಕೆಲಸ ಮಾಡೋ ಮನ್ಸೂಚನೆ ಕೊಟ್ಟಿದ್ದಾರೆ. ಬಾಹುಬಲಿ ದೇವಸೇನಾ ಸಿನಿಯಾನ ಮುಗೀತು ಅಂದುಕೊಳ್ತಿದ್ದವ್ರಿಗೆ ಈಕೆ ಸ್ವೀಟ್ ನ್ಯೂಸ್ ಕೊಡೋ ಸಾಧ್ಯತೆಯಿದೆ. ಇಷ್ಟಕ್ಕೂ ಅವ್ರನ್ನ ಇಂಪ್ರೆಸ್ ಮಾಡಿದ ಕಥೆ ಯಾವುದು..? ಯಾರು ಆ ಡೈರೆಕ್ಟರ್ ಅಂತೀರಾ..?

ಸ್ವೀಟಿ ಅನುಷ್ಕಾ ಶೆಟ್ಟಿ ನಿಶ್ಯಬ್ಧಂ ಚಿತ್ರದ ಬಳಿಕ ಬೇರಾವ ಚಿತ್ರಕ್ಕೂ ಕಮಿಟ್ ಆಗದೆ ಅಕ್ಷರಶಃ ನಿಶ್ಯಬ್ಧ ಆಗಿಬಿಟ್ಟಿದ್ದಾರೆ. ಅನುಷ್ಕಾ ಕುರಿತು ಕಳೆದ ವರ್ಷ ದಟ್ಟವಾಗಿ ಕೇಳಿಬಂದ ಸುದ್ದಿಗಳು ಎರಡೇ ಎರಡು. ಒಂದು ಈಕೆ ದುಬೈ ಮೂಲದ ಉದ್ಯಮಿ ಜೊತೆ ಮದುವೆ ಆಗ್ತಾರೆ ಅನ್ನೋದು. ಮತ್ತೊಂದು ಯುವಿ ಕ್ರಿಯೆಷನ್​​ನಲ್ಲಿ ಅನುಷ್ಕಾ ಹೊಸ ಸಿನಿಮಾ ಮಾಡ್ತಾರೆ ಅನ್ನೋದು. ಆದ್ರೆ ಎರಡಕ್ಕೆ ಎರಡೂ ಠುಸ್ ಆದ್ವು.

ಈ ವರ್ಷದ ಆರಂಭದಲ್ಲೇ ಚಿರಂಜೀವಿ ಅವ್ರ ನ್ಯೂ ಪ್ರಾಜೆಕ್ಟ್​​ನಲ್ಲಿ ಅನುಷ್ಕಾ ಶೆಟ್ಟಿ ನಟಿಸ್ತಾರೆ ಅನ್ನೋ ಸುದ್ದಿ, ಟೆಕೆಟ್ ಇಲ್ಲದೇನೇ ಹೈದ್ರಾಬಾದ್​ನಿಂದ ಚೆನ್ನೈ, ಬೆಂಗಳೂರು ಸೇರಿದಂತೆ ಪ್ಯಾನ್ ಇಂಡಿಯಾ ಸಂಚಾರ ಮಾಡ್ತಿದೆ. ಆದ್ರೆ ಅಸಲಿ ಮ್ಯಾಟರ್ ಅದಲ್ಲ. ಅದಕ್ಕೂ ಮೀರಿದ ಹೊಚ್ಚ ಹೊಸ ಸುದ್ದಿಯನ್ನ ನಾವು ಕೊಡ್ತಿದ್ದೀವಿ ಕೇಳಿ.

ಅನುಷ್ಕಾ ಶೆಟ್ಟಿ ನೆಕ್ಸ್ಟ್ ಸಿನಿಮಾ ಯಾವುದು..? ಯಾರ ಜೊತೆ ಅನ್ನೋ ಅಂತೆ ಕಂತೆಗಳಿಗೆ ಪುಷ್ಠಿ ನೀಡೋ ಅಂತಹ ಸಮಾಚಾರವೊಂದು ಹೊರಬಿದ್ದಿದೆ. ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಗೆದ್ದಂತಹ ನಿರ್ದೇಶಕರು ಸೃಷ್ಟಿಸಿರೋ ಕಥೆಯನ್ನ ಕೇಳಿ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಸಖತ್ ಥ್ರಿಲ್ಲ್ ಆಗಿದ್ದಾರಂತೆ. ಒಳ್ಳೆಯ ಪ್ರೊಡ್ಯೂಸರ್ ಸಿಗಲಿ. ಖಂಡಿತಾ ಈ ಸಿನಿಮಾನ ಮಾಡೇ ಮಾಡೋಣ ಅಂತ ಭರವಸೆ ಕೂಡ ಕೊಟ್ಟಿದ್ದಾರಂತೆ.

ಯಾರು ಅನುಷ್ಕ ಶೆಟ್ಟಿಯವರಿಗೆ ಕಥೆಯನ್ನ ಹೇಳಿ ಮೆಚ್ಚುಗೆಯನ್ನ ಪಡೆದಿರುವ ನಿರ್ದೇಶಕ ಅಂದ್ರೆ ಮಂಸೋರೆ. ಇವ್ರು ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ಅನುಷ್ಕಾ ಶೆಟ್ಟಿಯನ್ನ ಭೇಟಿಯಾಗಿ, ರಾಣಿ ಅಬ್ಬಕ್ಕನ ಕಥೆಯನ್ನು ಹೇಳಿ ಬಂದಿದ್ದಾರೆ.

ಸಂಚಾರಿ ವಿಜಯ್ ನಟನೆಯ ಆಕ್ಟ್ 1978 ಸಿನಿಮಾದ ನಂತರ ರಾಣಿ ಅಬ್ಬಕ್ಕ ಕಥೆಯನ್ನ ರೆಡಿ ಮಾಡಿದ್ರು ಮಂಸೋರೆ. ಕಥೆ ಸಿದ್ಧ ಮಾಡ್ಕೊಂಡು ಈ ಕಥೆಗೆ ನೀವು ಮಾತ್ರ ಜೀವ ತುಂಬಲು ಸಾಧ್ಯ ಮೇಡಂ ಅಂತ ಹೇಳಿಬಂದಿದ್ದಾರಂತೆ. ಯುವಿ ಕ್ರಿಯೆಷನನ್ಸ್ ಬ್ಯಾನರ್​ನಡಿ ಈ ಸಿನಿಮಾ ನಿರ್ಮಾಣ ಆಗೋ ಸಾಧ್ಯತೆಗಳು ಕೂಡ ಇದೆ. ಮಾಡೋ ಕೆಲಸದ ಮೇಲೆ ಅಪಾರ ಶ್ರದ್ಧೆ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡೋ ಮಂಸೋರೆ ಆರ್ಟಿಸ್ಟಿಕ್ ಹಿಟ್ಸ್ ರೀತಿ ಕಮರ್ಷಿಯಲ್ ಹಿಟ್ಸ್ ಕೂಡ ಕೊಡೋದ್ರಲ್ಲಿ ಡೌಟ್ ಇಲ್ಲ.

ಅರುಂಧತಿ, ನಿಶ್ಯಬ್ಧಂ, ರುದ್ರಮಾದೇವಿ ಹಾಗೂ ಭಾಗಮತಿ ಅಂತಹ ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡಿ ಮಿಂಚಿರೋ ಅನುಷ್ಕಾಗೆ ಮತ್ತೊಂದು ವುಮೆನ್ ಸೆಂಟ್ರಿಕ್ ಸಿನಿಮಾ ಮಾಡೋದು ಕಷ್ಟವಾಗಲಾರದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES