ಗುಜರಾತ್ : ಈಗಂತೂ ಬಹುತೇಕರಿಗೆ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ಕಂಡರೆ ಆವುಗಳನ್ನು ನೋಡಲು ತುಂಬಾ ಖುಷಿಯಾಗುತ್ತದೆ ಆದರೆ ಪ್ರಾಣಿಗಳನ್ನು ಸಾಕುವುದು ವಿಪರೀತ ಕಿರಿಕಿರಿ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ.
ಆದರೆ ಕೆಲವರು ಮಾತ್ರ ಈ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ತಮ್ಮ ಮನೆಯಲ್ಲಿಯೇ ತಮ್ಮ ಜೊತೆಗೆ ಇರಿಸಿಕೊಂಡು ಮಕ್ಕಳಂತೆ ಸಾಕುತ್ತಿರುತ್ತಾರೆ. ಕೆಲವರು ಮಾತ್ರ ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುತ್ತಾರೆ. ಅವುಗಳನ್ನು ತಮ್ಮ ಸ್ವಂತ ಮಕ್ಕಳಿಗಿಂತಲೂ ಜೋಪಾನವಾಗಿ ಸುರಕ್ಷಿತವಾಗಿ ಕಾಪಾಡುತ್ತಾರೆ.
ಗುಜರಾತ್ ಮೂಲದ 75 ವರ್ಷದ ವ್ಯಕ್ತಿಯು ಪಕ್ಷಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅವುಗಳಿಗಾಗಿ ಭವ್ಯವಾದ ಪಕ್ಷಿ ಮನೆಯನ್ನೇ ಕಟ್ಟಿಸಿದ್ದಾರೆ. ಹೆಸರು ಭಗವಾನ್‌ಜೀ ರೂಪಪಾರಾ. ಇವರು ಸಣ್ಣ ಪಕ್ಷಿ ಮನೆಗಳಿಂದ ಸ್ಫೂರ್ತಿ ಪಡೆದು ಭವ್ಯವಾದ ಪಕ್ಷಿ ಮನೆಯೊಂದನ್ನು ಕಟ್ಟಿಸಿದ್ದಾರೆ. 40 ಅಡಿ ಎತ್ತರ ಇರುವ ಪಕ್ಷಿ ಮನೆಯನ್ನು ತಯಾರಿಸಲು ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.