Wednesday, January 22, 2025

ಮತ್ತೆ ಖಾಕಿ ತೊಟ್ಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್

ಕಲ್ಟ್ ಕ್ಲಾಸಿಕ್ ಸಿನಿಮಾಗಳ ರಾ ಅಂಡ್ ರಗಡ್ ಡೈಲಾಗ್ಸ್ ಯಾರದ್ದು ಅಂದ್ರೆ ಮಾಸ್ತಿ ಕಡೆ ಬೆಟ್ಟು ಮಾಡಿ ತೋರಿಸ್ತಾರೆ. ಸಲಗ ಸೆನ್ಸೇಷನಲ್ ಹಿಟ್ ಬಳಿಕ ಮಾಸ್ತಿ ಮತ್ತೊಂದು ಮಾಫಿಯಾ ಕಥೆಗೆ ಕುಂಚ ಹಿಡಿದಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಗತ್ತು, ಗಮ್ಮತ್ತು ಹೆಚ್ಚಿಸಲಿರೋ ಮಾಸ್ತಿ ಡೈಲಾಗ್ಸ್ ಕುರಿತ ಸ್ಟೋರಿ ನಿಮಗಾಗಿ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇದೀಗ ಮಾಫಿಯಾ ಅನ್ನೋ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಹಿಂದೆ ಮಮ್ಮಿ ಸೇವ್ ಮಿ, ದೇವಕಿ ಅಂತಹ ಹಾರರ್ ಥ್ರಿಲ್ಲರ್ ಸಿನಿಮಾಗಳನ್ನು ಡೈರೆಕ್ಟ್ ಮಾಡಿದ್ದ ನಿರ್ದೇಶಕ ಲೋಹಿತ್ ಈ ಚಿತ್ರಕ್ಕೆ ಌಕ್ಷನ್ ಕಟ್ ಹೇಳ್ತಿದ್ದಾರೆ. ಅಂದಹಾಗೆ ಇದು ಪ್ರಜ್ವಲ್ ದೇವರಾಜ್​ ಅವ್ರ 35ನೇ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅವ್ರು ಡಿ.ಸತ್ಯನಾರಾಯಣ ಅನ್ನೋ ಹೆಸರಿನ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚ್ತಿದ್ದಾರೆ.

ಕಳೆದ ವರ್ಷ ತೆರೆಕಂಡ ಇನ್ಸ್​ಪೆಕ್ಟರ್ ವಿಕ್ರಂ ಸಿನಿಮಾದಲ್ಲೂ ಪ್ರಜ್ವಲ್ ದೇವರಾಜ್​​ ಖಾಕಿ ತೊಟ್ಟು ಪೊಲೀಸ್ ಆಫಿಸರ್ ಪಾತ್ರದಲ್ಲಿ ಮಿಂಚಿದ್ರು. ಇದೀಗ ಮತ್ತೆ ಮಾಫಿಯಾ ಚಿತ್ರದಲ್ಲೂ ಲಾಟಿ ಹಿಡಿದು, ದುಷ್ಟರನ್ನು ಸದೆಬಡಿಸಯುವ ಪೊಲೀಸ್ ಅಧಿಕಾರಿಯ ರೋಲ್​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಮಾಫಿಯಾ ಚಿತ್ರದ ಮುಹೂರ್ತವನ್ನು ನೆರವೇರಿಸಿತ್ತು. ಈಗಾಗ್ಲೇ ಸಿನಿಮಾ ಚಿತ್ರೀಕರಣ ಕೂಡ ಆರಂಭವಾಗಿದೆ.

ಮಾಫಿಯಾ ಅಂದಕೂಡ್ಲೇ ಅಂಡರ್​ವರ್ಲ್ಡ್​ ಲೋಕದ ಕರಾಳ ಕಥೆ ಇರಬಹುದು ಅನ್ಸುತ್ತದೆ. ಆದ್ರೆ ಅದನ್ನೂ ಮೀರಿ ಒಂದೊಳ್ಳೆ ಕಂಟೆಂಟ್ ಓರಿಯೆಂಟೆಡ್ ಸಬ್ಜೆಕ್ಟ್​​ನ್ನು ಇಟ್ಕೊಂಡು ಮಾಫಿಯಾ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಲೋಹಿತ್​​. ಅಂದಹಾಗೆ ಸ್ಯಾಂಡಲ್​ವುಡ್​​ನ ರಾ ಅಂಡ್ ರಗಡ್ ಡೈಲಾಗ್ಸ್ ರೈಟರ್​ ಆಗಿ ಸಾಕಷ್ಟು ಖ್ಯಾತಿ ಗಳಿಸಿರೋ ಮಾಸ್ತಿ ಅವ್ರು ಈ ಚಿತ್ರಕ್ಕೆ ಸಂಭಾಷಣೆ ಬರೀತಿದ್ದಾರೆ.

ಕನ್ನಡ ಸಿನಿರಸಿಕರಿಗೆಲ್ಲಾ ಮಾಸ್ತಿ ಅವ್ರ ಡೈಲಾಗ್ಸ್ ಪರಿಚಯ ಚೆನ್ನಾಗಿ ತಿಳಿದಿರುತ್ತದೆ. ಕನ್ನಡದ ಹಲವು ಸಿನಿಮಾಗಳಿಗೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಅದ್ರಲ್ಲೂ ಸೆಂಚುರಿ ಸ್ಟಾರ್ ಶಿವಣ್ಣನ ಟಗರು ಸಿನಿಮಾದಲ್ಲಿ ಮಾಸ್ತಿ ಪವರ್​ಫುಲ್ ಡೈಲಾಗ್ಸ್​ ಬರೆದು ಎಲ್ಲರ ಗಮನ ಸೆಳೆದಿದ್ರು. ಕಳೆದ ವರ್ಷ ರಿಲೀಸ್ ಆದ ದುನಿಯಾ ವಿಜಯ್ ಅವ್ರ ಸಲಗ ಸಿನಿಮಾದಲ್ಲೂ ರಾ ಡೈಲಾಗ್ಸ್​ ಬರೆದು, ತಮ್ಮ ಬರವಣಿಗೆಯ ತಾಕತ್ತೇನು ಅನ್ನೋದನ್ನು ಮತ್ತೆ ಪ್ರೂವ್ ಮಾಡಿದ್ರು.

ಇದೀಗ ಮಾಫಿಯಾ ಸಿನಿಮಾಗೂ ಕುಂಚ ಹಿಡಿದಿರೋ ಮಾಸ್ತಿ, ಮತ್ತೆ ತಮ್ಮ ಸಂಭಾಷಣೆಗಳ ಮೂಲಕ ಮೋಡಿ ಮಾಡಲು ಹೊರಟಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಪ್ರಜ್ವಲ್​ ಜೋಡಿಯಾಗಿ, ತನಿಖಾ ಪತ್ರಕರ್ತೆಯ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸ್ತಿದ್ದಾರೆ. ವಿಶೇಷ ಅಂದ್ರೆ, ಚಿತ್ರದಲ್ಲಿ ಪ್ರಜ್ವಲ್ ತಂದೆ, ನಟ ದೇವರಾಜ್​ ಕೂಡ ಪೊಲೀಸ್​ ಅಧಿಕಾರಿಯ ರೋಲ್​ಗೆ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ತಂದೆ, ಮಗನ ನಡುವಿನ ದೃಶ್ಯಗಳು ಹೇಗಿರಲಿವೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಇನ್ನು ಕಲಾವಿದರಾದ ಒರಟ ಪ್ರಶಾಂತ್, ಸಾಧುಕೋಕಿಲ ಕೂಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ರೆ, ಡಿಫರೆಂಟ್ ಡ್ಯಾನಿ ಆ್ಯಕ್ಷನ್ ಸೀಕ್ವೆನ್ಸ್​ನ್ನು ಡೈರೆಕ್ಟ್​ ಮಾಡ್ತಿದ್ದಾರೆ. ಚಿತ್ರಕ್ಕೆ ಕುಮಾರ್.ಬಿ ಬಂಡವಾಳ ಹೂಡಿದ್ದು, ಕುಮಾರ್​ ಫಿಲ್ಮ್ಸ್​ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಒಟ್ಟಾರೆ ಮಾಫಿಯಾ ಚಿತ್ರಕ್ಕೆ ಮಾಸ್ತಿ ಡೈಲಾಗ್ಸ್ ಬರೆಯುತ್ತಿರೋದು ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ

RELATED ARTICLES

Related Articles

TRENDING ARTICLES