Thursday, January 23, 2025

ಪ್ರತಿಭಟನಾಕಾರರು ಅಸಲಿಗೆ ರೈತರೇ ಅಲ್ಲ..?

ಮೋದಿ ಭದ್ರತಾ ವೈಫಲ್ಯ ತುಂಬ ಗಂಭೀರವಾಗಿದ್ದು, ಸುಪ್ರೀಂಕೋರ್ಟ್‌ ಸಂಪೂರ್ಣ ತನಿಖೆಗೆ ಆದೇಶಿಸಿದೆ.. ಈ ಮಧ್ಯೆ, ರಾಷ್ಟ್ರೀಯ ಮಧ್ಯಮವೊಂದು ನಡೆಸಿರುವ ಸ್ಟಿಂಗ್‌ನಲ್ಲಿ ಮಹತ್ವದ ಅಂಶಗಳು ಬಯಲಾಗಿದ್ದು, ಪೊಲೀಸರ ಕುಮ್ಮಕ್ಕು ಇತ್ತ ಅನ್ನೋದು ಬಟಾಬಯಲಾಗಿದೆ.

ಪಂಜಾಬ್‌ನಲ್ಲಾದ ಪಿಎಂ ಭದ್ರತಾ ಲೋಪದ ವಿಚಾರ ಸದ್ಯ ಸುಪ್ರೀಂ ಅಂಗಳದಲ್ಲಿದೆ. ಬಿಜೆಪಿ ನಾಯಕರೆಲ್ಲರೂ ಪಂಜಾಬ್ ನಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನ ಈ ಘಟನೆಗೆ ಹೊಣೆ ಮಾಡುತ್ತಿದ್ದಾರೆ. ಇತ್ತ ಸುಪ್ರೀಂ ಕೋರ್ಟ್ ಘಟನೆಯ ಸಂಪೂರ್ಣ ತನಿಖೆಗೆ ಆದೇಶಿಸಿದೆ. ತನಿಖಾ ಸಮಿತಿ ಮುಖ್ಯಸ್ಥರನ್ನಾಗಿ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾರನ್ನು ಸುಪ್ರೀಂಕೋರ್ಟ್ ನೇಮಕ ಮಾಡಿದೆ. ಪ್ರಧಾನಿ ಮೋದಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟಂತೆ ಲಾಯರ್ಸ್ ವೈಸ್ ಎಂಬ ಎನ್ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ನಡೆಸುತ್ತಿದೆ.

ಆದ್ರೆ, ಜನವರಿ ಐದನೇ ತಾರೀಖಿನಂದು ಪ್ರಧಾನಿ ಮೋದಿ ಹುಸೇನಿವಾಲ ಪ್ರದೇಶಕ್ಕೆ ತೆರಳುತ್ತಿದ್ದಾಗ ಫಿರೋಜ್ ಪುರ ಫ್ಲೈಓವರ್ ನಲ್ಲಿ ನಿಜಕ್ಕೂ ಆಗಿದ್ದೇನು ಅನ್ನೋದ್ರ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ತನಿಖಾ ವರದಿ ಮಾಡಿದೆ. ಸ್ಫೋಟಕ ಅಂಶಗಳು ಹೊರ ಬಿದ್ದಿವೆ. ಆ ತನಿಖಾ ವರದಿಯಲ್ಲಿ ಅಚ್ಚರಿ ಮೂಡಿಸುವ ಸಂಗತಿಗಳಿವೆ ಎನ್ನಲಾಗಿದೆ.

ಪಂಜಾಬ್ ಪೊಲೀಸ್ ನ ಉನ್ನತ ಅಧಿಕಾರಿಗಳಿಗೆ ಪ್ರಧಾನಿ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಯಬಹುದು ಎಂಬ ಮಾಹಿತಿ ತಿಳಿದಿದ್ದರೂ ಸೈಲೆಂಟ್ ಆಗಿದ್ದರು.! ಈ ಹೇಳಿಕೆ ನೀಡಿರುವುದು ಬೇರೆ ಯಾರು ಅಲ್ಲಾ, ಫಿರೋಜ್ ಪುರದ ಡೆಪ್ಯುಟಿ ಎಸ್ಪಿ ಸುಖ್ದೇವ್ ಸಿಂಗ್. ಸ್ಟಿಂಗ್ ಆಪರೇಷನ್ ನಲ್ಲಿ ಈ ಮಾಹಿತಿ ಬಯಲಾಗಿದ್ದು, ರಾಜ್ಯ ಗುಪ್ತಚರ ಇಲಾಖೆಗಳ ವಿಫಲತೆ ಬಗ್ಗೆ ಕೇಳಿದಾಗ ಸುಖ್ದೇವ್ ಸಿಂಗ್ ಅವರು ಪಿಎಂ ಅವರ ನಿಗದಿತ ರ್ಯಾಲಿಗೆ ತಲುಪುವ ನಿರ್ಣಾಯಕ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಲ್ಲಿಸಲು ಮತ್ತು ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪ್ರತಿಭಟನಾಕಾರರು ಯೋಜನೆ ಮಾಡಿದ್ದರು, ಈ ಬಗ್ಗೆ ಜನವರಿ 2 ರಂದೇ ಎಡಿಜಿಪಿ ಅವರಿಗೆ ಮಾಹಿತಿ ನೀಡಿದ್ದೆವು ಎಂಬ ಸ್ಫೊಟಕ ಮಾಹಿತಿ ನೀಡಿದ್ದಾರೆ.

ಪಿಎಂ ಭೇಟಿಯ ದಿನದಂದು, ಪ್ರತಿಭಟನೆಗಳ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಪೊಲೀಸ್ ಸಿಬ್ಬಂದಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಖಾಸಗಿ ವಾಹಿನಿ ಸುದ್ದಿ ಪ್ರಕಟಿಸಿದೆ. ಇಷ್ಟಾದರೂ ಮಾರ್ಗವನ್ನು ಏಕೆ ತೆರವುಗೊಳಿಸಿಲ್ಲ. ಪ್ರತಿಭಟನಾಕಾರರ ಚಲನವಲನದ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಡಿಎಸ್ಪಿ ಸುಖದೇವ್ ಸಿಂಗ್ ಸಂದೇಶ ನೀಡಿದ್ದರೂ ಏಕೆ ಅಗತ್ಯ ಕ್ರಮ ಕೈಗೊಂಡಿಲ್ಲ. ಇವರ ಈ ನಡೆ ಹಿಂದೆ ಪಂಜಾಬ್​ ಸರ್ಕಾರದ ಕೈವಾಡವಿದ್ಯಾ? ಎಂಬ ಅನುಮಾನ ವ್ಯಕ್ತವಾಗ್ತಿದೆ. ಇನ್ನು ಸುಖದೇವ್ ತಮ್ಮ ಫೋನ್ನಲ್ಲಿರುವ ಸಂದೇಶಗಳನ್ನು ಸಹ ತೋರಿಸಿ ದಾಖಲೆ ನೀಡಿದ್ದಾರೆ.

ಇನ್ನು S.P ಸುಖ್​ದೇವ್​ ಈ ಕುರಿತು ವಿವರವಾಗಿ ತಿಳಿಸಿದ್ದು ಮಧ್ಯಾಹ್ನ 12.50 ಕ್ಕೆ, ಭಟಿಂಡಾದ ಹಿರಿಯ ಪೊಲೀಸ್ ಅಧೀಕ್ಷಕರಿಂದ ನನಗೆ ಕರೆ ಬಂದಿತ್ತು. ಅವರು ಟ್ರಾಫಿಕ್ ಜಾಮ್ ಇದೆಯೇ ಎಂದು ಕೇಳಿದರು. ನಿಜವಾಗಿಯೂ ಇಲ್ಲಿ ಜಾಮ್ ಆಗಿದೆ ಮತ್ತು ಇಡೀ ಪ್ರದೇಶವನ್ನು ನಿರ್ಬಂಧಿಸಲಾಗಿದೆ ಎಂದು ನಾನು ಅವರಿಗೆ ಹೇಳಿದೆ. ಪಂಜಾಬ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರ ಮೇಲೆ ಚಪ್ಪಲಿ ಎಸೆದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಫ್ರಿಂಜ್ ಗ್ರೂಪ್ ಸಿಖ್ ಫಾರ್ ಜಸ್ಟೀಸ್ ಘೋಷಿಸಿದೆ ಎಂದು ಡಿಎಸ್ಪಿ ಸುಖದೇವ್ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ನಮ್ಮ ಬಳಿ ಜನವರಿ 4 ರಂದೇ ಈ ಬಗ್ಗೆ ಮಾಹಿತಿ ಇತ್ತು ಎಂದು ಹೇಳಿದ್ದಾರೆ.

ಈ ಮೂಲಕ ಪ್ರಧಾನಿ ಸುತ್ತುವರೆದಿದ್ದು ಬಿಜೆಪಿ ಕಾರ್ಯಕರ್ತರೇ, ಇದೊಂದು ಪೂರ್ವ ನಿಯೋಜಿತ. ಪಂಜಾಬ್​ ಸರ್ಕಾರ ದೂಷಿಸಲು ಬಜೆಪಿ ಮಾಡಿದ ಹುನ್ನಾರ ಎಂಬ ವದಂತಿಗೆ ತೆರೆ ಬಿದ್ದಂತಿದೆ. ಇತ್ತ ಪ್ರತಿಭಟನೆ ನಡೆದ ವ್ಯಾಪ್ತಿಯ ಪ್ರದೇಶದ ಪೊಲೀಸರಿಂದಲೂ, ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರದಿಂದ ಪ್ರತಿಭಟನಕಾರರನ್ನು ಚದುರಿಸುವ ಆದೇಶ ಬಂದಿರಲಿಲ್ಲ ಎಂದು ಕುಲ್ಗಾರಿಯ ಪೊಲೀಸ್ ಅಧಿಕಾರಿ ಬೀರ್ಬಲ್ ಸಿಂಗ್ ಹೇಳಿದ್ದಾರೆ.

ದೇಶದ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥರಾದ ಪ್ರಧಾನಿಗೆ ಭದ್ರತಾ ಲೋಪವಾಗೋದು ಸಾಮಾನ್ಯ ವಿಷಯವಲ್ಲ. ಇದೊಂದು ಗಂಭೀರ ವಿಷಯ. ಎಲ್ಲೇ ಹೋದರೂ ಪ್ರಧಾನ ಮಂತ್ರಿಗೆ ಸಾಂವಿಧಾನಿಕವಾಗಿ ಕಡ್ಡಾಯವಾಗಿ ಭದ್ರತೆ ಇದ್ದೇ ಇರುತ್ತೆ. ಅಲ್ಲದೆ ಅವರು ಹೋಗಿದ್ದು, ವಿರೋಧಿ ರಾಷ್ಟ್ರದ ಸಮೀಪವಿರುವ ಪಂಜಾಬ್​ ರಾಜ್ಯಕ್ಕೆ. ಇದೊಂದು ಸೂಕ್ಷ್ಮ ವಿಚಾರ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ ಹೇಗೋ ನಾನು ಬದುಕಿ ಬಂದೆ. ಈ ಮಾತಿನಲ್ಲಿಆತಂಕ, ಅಸಮಧಾನ, ಅನುಮಾನ ಎಲ್ಲವೂ ಇತ್ತು. ಈ ಕುರಿತು ರಾಷ್ಟ್ರಪತಿ ಆದಿಯಾಗಿ ಎಲ್ಲಾ ನಾಯಕರು ಕಳವಳ ವ್ಯಕ್ತಪಡಿಸಿದ್ದರು. ಪಿಎಂ ಕಾನ್ವಾಯ್ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ಅದೇ ರಸ್ತೆಯ ಬಳಿಯಿದ್ದ ಲಿಕ್ಕರ್ ಶಾಪ್ ಒಂದು ತೆರೆದೇ ಇತ್ತು. ಆ ವೇಳೆ ನಾನು ಅಂಗಡಿಯಲ್ಲಿ ಇದ್ದೆ ಎಂದು ಮಾಲೀಕ ಒಪ್ಪಿಕೊಂಡಿದ್ದಾನೆ.

ಪಿರೋಜ್‌ಪುರ ಘಟನೆಗೆ ಪ್ಯಾರೇಗಾಂವ್ ಮುಖ್ಯಸ್ಥ ಹೇಳಿದ್ದೇನು :

ಫಿರೋಜ್ ಪುರ ಸಮೀಪದ ಹಳ್ಳಿ ಪ್ಯಾರೇಗಾಂವ್. ಅಲ್ಲಿನ ಸರ್ಪಂಚ್ ಪ್ರಕಾರ, ಪ್ರತಿಭಟನಾಕಾರರು ಗ್ರಾಮಸ್ಥರನ್ನ ಗುರುದ್ವಾರದ ಬಳಿ ಜಮಾಯಿಸಲು ತಿಳಿಸಿದ್ದರು. ಗ್ರಾಮಸ್ಥರ ಬಳಿ ರಸ್ತೆ ತಡೆ ನಡೆಸಿದ ರೈತರಿಗೆ ಸಹಾಯ ಕೋರಿದ್ದರು, ಆ ಯುವಕರ ಕೈಗಳಲ್ಲಿ ಲಾಠಿಗಳು ಇದ್ದವು. ಇದು ಪ್ರಧಾನಿ ಮೋದಿ ಆಗಮನಕ್ಕೆ ಹತ್ತು ನಿಮಿಷಗಳ ಮೊದಲು ನಡೆದಿದೆ ಎಂದು ಸರ್ಪಂಚ್ ನಿಚತ್ತರ್ ಸಿಂಗ್ ಹೇಳಿದ್ದಾರೆ.

ಯಾವುದೇ ತನಿಖೆ, ವಿಚಾರಣೆ ನಡೆಸದೆ ಪಂಜಾಬ್ ಸರ್ಕಾರವನ್ನು ತಪ್ಪಿತಸ್ಥ ಎಂದು ಬಿಂಬಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಪಂಜಾಬ್‌ನ ಭಟಿಂಡಾ ಎಸ್ಪಿಗೆ ನೀಡಿದ್ದ ಶೋಕಾಸ್ ನೋಟಿಸ್ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ಈಗ ತನಿಖಾ ವರದಿಯಿಂದ ಸಂಪೂರ್ಣ ಘಟನೆಯ ಸಣ್ಣ ಭಾಗ ತೆರೆದುಕೊಂಡಿದೆ. ಇದು ಎಷ್ಟು ಸತ್ಯ ಎನ್ನುವುದು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ನಂತರ ಮಾತ್ರ ಬಹಿರಂಗಗೊಳ್ಳುತ್ತದೆ.

RELATED ARTICLES

Related Articles

TRENDING ARTICLES