Sunday, January 12, 2025

ಗದಗ ತಾಲೂಕಿನ ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆ ಬಂದ್

ಗದಗ : ಶಾಲೆಯ ಓರ್ವ ಶಿಕ್ಷಕ, ಇಬ್ಬರು ಶಿಕ್ಷಕಿಯರು ಇಬ್ಬರು ವಿದ್ಯಾರ್ಥಿಗೆ ಕೊರೋನಾ ಸೋಂಕು ಧೃಡ ಹಿನ್ನಲೆ ಶಾಲೆ ಬಂದ್ ಮಾಡಲಾಗಿದೆ.

ರಾಜ್ಯದ ವಿವಿಧ‌ ಭಾಗಗಳ ಒಟ್ಟು 1900 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.68 ಮಕ್ಕಳು ವಸತಿ‌ ನಿಯಮದಲ್ಲಿದ್ದು, 10ನೇ ತರಗತಿಯಲ್ಲಿ ಒಟ್ಟು 150 ಮಕ್ಕಳು ಇದ್ದಾರೆ. ಆರೋಗ್ಯ ಅಧಿಕಾರಿಗಳ ಸಲಹೆ ಮೇರೆಗೆ ಜ.19 ರವರೆಗೆ ಶಾಲೆ ಬಂದ್ ಮಾಡಲಾಗಿದೆ.
1 ರಿಂದ 10 ನೇ ತರಗತಿವರೆಗೆ ಶಾಲೆ ಬಂದ್ ಮಾಡಲಾಗಿದೆ ಎಂದು ಡಿಡಿಪಿಐ ಜಿ.ಎಂ.ಬಸವಲಿಂಗಪ್ಪ ಹೇಳಿದ್ದಾರೆ.
ಈಗಾಗಲೇ 57 ರ‍್ಯಾಪಿಡ್ ಟೆಸ್ಟ್ ಹಾಗೂ 97 ವಿದ್ಯಾರ್ಥಿಗಳಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ.ವಸತಿ ನಿಲಯದಲ್ಲಿರುವ ಎಲ್ಲ ಮಕ್ಕಳಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.ಕೊರೋನಾ ಪಾಸಿಟಿವ್ ಬಂದಿರುವವನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ.

RELATED ARTICLES

Related Articles

TRENDING ARTICLES