Wednesday, January 22, 2025

ಕಲ್ಯಾಣ್ ದೇವ್ ಜೊತೆ ಡಿಂಪಲ್ ಕ್ವೀನ್ ರೊಮ್ಯಾನ್ಸ್

ರಮ್ಯಾ ನಂತ್ರ ಸ್ಯಾಂಡಲ್​ವುಡ್​ನ ಮಾಡ್ರನ್ ಪದ್ಮಾವತಿಯಾಗಿ ಮಿಂಚಿದ ಡಿಂಪಲ್ ಕ್ವೀನ್ ರಚಿತಾ ರಾಮ್, ಇಂದಿಗೂ ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ. ಈ ಮಧ್ಯೆ ಸೈಲೆಂಟ್ ಆಗಿ ಪಕ್ಕದ ಟಾಲಿವುಡ್​ಗೂ ಪದಾರ್ಪಣೆ ಮಾಡಿರೋ ಬುಲ್ ಬುಲ್ ಬೆಡಗಿಯ ಚೊಚ್ಚಲ ತೆಲುಗು ಸಿನಿಮಾ ಸಂಕ್ರಾಂತಿಯ ಸಂಭ್ರಮ ಹೆಚ್ಚಿಸಲಿದೆ. ಇಷ್ಟಕ್ಕೂ ಯಾವುದು ಆ ಚಿತ್ರ..?

ಸೂಪರ್ ಮಚ್ಚಿ.. ಈ ವಾರ ಥಿಯೇಟರ್ ಅಂಗಳಕ್ಕೆ ಬರ್ತಿರೋ ಯೂತ್​ಫುಲ್ ಎಂಟರ್​ಟೈನರ್. ಅಂದಹಾಗೆ ಇದು ಕನ್ನಡ ಸಿನಿಮಾ ಅಲ್ಲ. ಕನ್ನಡದ ನಟೀಮಣಿ ರಚಿತಾ ರಾಮ್ ಲೀಡ್​ನಲ್ಲಿ ನಟಿಸಿರೋ ತೆಲುಗು ಸಿನಿಮಾ.  ಡಿಂಪಲ್ ಕ್ವೀನ್ ರಚ್ಚು ಚೊಚ್ಚಲ ಪರಭಾಷಾ ಸಿನಿಮಾ ಇದು.

ಬುಲ್ ಬುಲ್ ಬೆಡಗಿ ಸ್ಯಾಂಡಲ್​ವುಡ್​ನಲ್ಲಿ ಬಹುತೇಕ ಎಲ್ಲಾ ಬಿಗ್ ಸ್ಟಾರ್ಸ್​ ಜೊತೆ ನಟಿಸೋ ಮೂಲಕ ಬಹುಬೇಗ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ ಅನಿಸಿಕೊಂಡರು. ಅಷ್ಟೇ ಬೇಗ ರಚ್ಚು ಗ್ಲಾಮರ್​ನ ಟಾಲಿವುಡ್ ಮಂದಿ ಕೂಡ ಕ್ಯಾಚ್ ಮಾಡಿದ್ರು. ಅದೂ ಮೆಗಾಸ್ಟಾರ್ ಚಿರಂಜೀವಿ ಅವ್ರ ಅಳಿಯ ಕಲ್ಯಾಣ್ ದೇವ್ ಜೊತೆ ರಚಿತಾ ಫಸ್ಟ್ ಮೂವಿ ಅನ್ನೋದೇ ವಿಶೇಷ.

ಸೂಪರ್ ಮಚ್ಚಿ ಟೈಟಲ್​ಗೆ ತಕ್ಕನಾಗಿ ಪಕ್ಕಾ ಯೂತ್​ಫುಲ್ ಎಂಟರ್​ಟೈನರ್ ಆಗಿದ್ದು, ಕೊರೋನಾದಿಂದ ರಿಲೀಸ್ ತಡವಾಯ್ತು. ಲೇಟ್ ಆದ್ರೂ ಲೇಟೆಸ್ಟ್ ಆಗಿ ಥಿಯೇಟರ್​ ಅಂಗಳಕ್ಕೆ ಎಂಟ್ರಿ ಕೊಡೋಕೆ ಬರ್ತಿರೋ ಈ ಚಿತ್ರ, ಇದೇ ಶುಕ್ರವಾರ ಸಂಕ್ರಾಂತಿ ಹಾಗೂ ಬೋಗಿ ಹಬ್ಬದ ಸಂಭ್ರಮವನ್ನ ದುಪ್ಪಟ್ಟು ಮಾಡಲಿದೆ.

ಟ್ರೈಲರ್ ರಿವೀಲ್ ಮಾಡಿರೋ ಚಿತ್ರತಂಡ, ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ ಅನ್ನೋದ್ರ ಹಿಂಟ್ ಬಿಟ್ಟುಕೊಟ್ಟಿದೆ. ಕಲ್ಯಾಣ್ ದೇವ್- ರಚಿತಾ ಆನ್ ಸ್ಕ್ರೀನ್ ಕೆಮಿಸ್ಟ್ರಿ ಇಂಪ್ರೆಸ್ಸೀವ್ ಆಗಿದ್ದು, ಡೈಲಾಗ್ಸ್ ಹಾಗೂ ಮೇಕಿಂಗ್ ಮಜಭೂತಾಗಿ ಮೂಡಿಬಂದಿದೆ. ಪುಲಿ ವಾಸು ಌಕ್ಷನ್ ಕಟ್ ಹೇಳಿರೋ ಈ ಚಿತ್ರವನ್ನ ರಿಜ್ವಾನ್ ನಿರ್ಮಿಸಿದ್ದಾರೆ. ತಮನ್ ಮ್ಯೂಸಿಕ್ ಫ್ರೆಶ್ ಫೀಲ್ ಕೊಡ್ತಿದ್ದು, ಸಾಂಗ್ಸ್ ಈಗಾಗ್ಲೇ ಎಲ್ಲರೂ ಗುನುಗುವಂತಾಗಿವೆ.

ಲವ್ ಜೊತೆ ಎಮೋಷನ್ಸ್, ಫ್ಯಾಮಿಲಿ ಸೆಂಟಿಮೆಂಟ್ಸ್, ಌಕ್ಷನ್ ಸೀಕ್ವೆನ್ಸ್​ಗಳಿಂದ ಪಕ್ಕಾ ಕಮರ್ಷಿಯಲ್ ಎಂಟರ್​ಟೈನರ್ ಆಗಿ ಹೊರಹೊಮ್ಮಲಿದೆ. ಚಿರು ಫ್ಯಾಮಿಲಿಯ ಹೀರೋ ಆಗಿರೋದ್ರಿಂದ ಇದು ರಚಿತಾ ರಾಮ್ ಟಾಲಿವುಡ್ ಎಂಟ್ರಿಗೆ ಪ್ಲಸ್ ಆಗಲಿದೆ. ಮೆಗಾ ಫ್ಯಾಮಿಲಿ ಫ್ಯಾನ್ಸ್​ಗೆ ರಚ್ಚು ಸಿನಿಮಾ ಕನೆಕ್ಟ್ ಆಗಲಿದೆ. ಇನ್ನೂ ಶುಕ್ರವಾರ ರಿಲೀಸ್ ಆದ ಬಳಿಕ ಚಿತ್ರದ ಅಸಲಿ ರಿಪೋರ್ಟ್​ ಹೊರಬೀಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES