Wednesday, January 22, 2025

ಪಾದಯಾತ್ರೆ ಅಲ್ಲ ಕೊರೊನಾ ಜಾತ್ರೆ ಇದು : ತೇಜಸ್ವಿನಿಗೌಡ

ರಾಮನಗರ : ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ಕುರ್ಚಿಯ ಸ್ಪರ್ಧೆಯಲ್ಲಿ ಪಾದಯಾತ್ರೆ ಮಾಡ್ತಿದ್ದಾರೆ ಎಂದರು.

ಕೋವಿಡ್ ಹೆಚ್ಚಳದ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ಸಿಗೆ ಕಾಮನ್ ಸೆನ್ಸ್ ಇಲ್ಲ, ಆದರಲ್ಲೂ ಡಿಕೆಶಿಗೆ ಗುಲಗಂಜಿಯಷ್ಟು ಕಾಮನ್ ಸೆನ್ಸ್ ಇಲ್ಲ, ಅಮಾನವೀಯವಾಗಿ ನಡೆದುಕೊಳ್ತಿದ್ದಾರೆ,ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಹಳಷ್ಟು ಜನರಿಗೆ ಕೊರೊನಾ ಬಂದಿದೆ.ರಾಮನಗರದಲ್ಲಿ 100 ಜನಕ್ಕೆ ಟೆಸ್ಟ್ ಮಾಡಿದರೆ, ೩೦ ಜನರಿಗೆ ಪಾಸಿಟಿವ್ ಬರ್ತಿದೆ ಇದು ಪಾದಯಾತ್ರೆ ಅಲ್ಲ.. ಕೊರೊನಾ ಜಾತ್ರೆ ಇದು,ಡಿಕೆಶಿ ಸಿಎಂ ಮಾಡಲು, ಡಿಕೆಶಿ ಬೇಳೆ ಬೇಯಿಸಲು ಕಾಂಗ್ರೆಸ್ ಹೈಕಮಾಂಡ್ ಕೂಡ ಇದಕ್ಕೆ ಬೆಂಬಲ ಕೊಟ್ಟಿದೆ ಎಂದು ಹೇಳಿದರು.

ಆದರೆ ಕಾಂಗ್ರೇಸ್ ಪಾದಯಾತ್ರೆ 5ನೇ ದಿನಕ್ಕೆ ಮೊಟಕುಗೊಳಿಸುವ ಅಂತಿಮ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಕೋವಿಡ್ ಕಡಿಮೆಯಾದ ನಂತರ ಪಾದಯಾತ್ರೆ ಮುಂದುವರಿಕೆ,ಅಲ್ಲಿಯವರೆಗೆ ಪಾದಯಾತ್ರೆ ಮೊಟಕಿಗೆ ನಿರ್ಧಾರವನ್ನು ಮಾಡಲಾಗಿದೆ ಎಂದು ಸಿದ್ದು,ಡಿಕೆಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಮಾಡಲಾಗಿದೆ.

 

RELATED ARTICLES

Related Articles

TRENDING ARTICLES