Monday, December 23, 2024

ಮೇಕೆದಾಟು ಪಾದಯಾತ್ರೆಗೆ ಅಲ್ಪವಿರಾಮ​..!

ರಾಮನಗರ : ಕಾಂಗ್ರೆಸ್​ ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಹೈಕಮಾಂಡ್​ ಸೂಚನೆ ಬೆನ್ನಲ್ಲೇ ಪಾದಯಾತ್ರೆ ಅಂತ್ಯಗೊಳಿಸಲಾಗಿದೆ.

11 ದಿನಗಳ ಪಾದಯಾತ್ರೆ ನಾಲ್ಕೇ ದಿನಕ್ಕೆ ಮುಕ್ತಾಯವಾಗಿದ್ದು, 5ನೇ ದಿನದ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಅಂತ್ಯಗೊಂಡಿದೆ. ಕಾಂಗ್ರೆಸ್​ ನಾಯಕರ ಸಭೆ ಬಳಿಕ ಒಮ್ಮತದ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಕೊರೋನಾ ಸೋಂಕು ಕಡಿಮೆ ಆದ ಬಳಿಕ ಪಾದಯಾತ್ರೆಯನ್ನ ಮತ್ತೆ ಮುಂದುವರೆಸಲಾಗುತ್ತದೆ.

ರಾಮನಗರದಿಂದಲೇ ಹೋರಾಟವನ್ನ ಮುಂದುವರೆಸೋದಕ್ಕೆ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ. ಕೋರ್ಟ್​ ಆದೇಶ ಪಾಲಿಸೋಣ, ಪ್ರತಿಷ್ಠೆ ಬಿಟ್ಟು ಜನಾಭಿಪ್ರಾಯ ಕೇಳೋಣ ಎಂದು ಸಿದ್ದರಾಮಯ್ಯ ಹೇಳಿದರು. ಸಭೆಯಲ್ಲಿ ಸಿದ್ದರಾಮಯ್ಯ ಮಾತಿಗೆ ಎಲ್ಲ ಮುಖಂಡರು ಸಹಮತವನ್ನ ತಿಳಿಸಿದ್ರರು.

 

RELATED ARTICLES

Related Articles

TRENDING ARTICLES