Monday, December 23, 2024

ಹೀರೋ ರಾಟ್​ ನೆನಪು ಮಾತ್ರ

ತಾಂಜೇನಿಯಾ : ನೆಲದಲ್ಲಿ ಅಡಗಿಸಿಟ್ಟ ಬಾಂಬ್​ಗಳನ್ನು ಪತ್ತೆ ಮಾಡಿವುದರಲ್ಲಿ ನಿಸ್ಸೀಮನಾಗಿದ್ದ ಇಲಿ ಮಾಗ್ವಾ ಇನ್ನು ನೆನಪು ಮಾತ್ರ.

ತಾಂಜೇನಿಯಾದಲ್ಲಿ ಹುಟ್ಟಿ ವಿಶೇಷ ತರಬೇತಿ ಪಡೆದು 5 ವರ್ಷಗಳ ಕಾಲ ಕಾಂಬೋಡಿಯಾದಲ್ಲಿ ಭದ್ರತಾಪಡೆಗಳೊಂದಿಗೆ ಕಾರ್ಯನಿರ್ವಹಿಸಿದ್ದ ಮಾಗ್ವಾ ಇದೀಗ ಸಾವನ್ನಪ್ಪಿದೆ.

ಈ ಬಗ್ಗೆ ಇಲಿಗಳಿಗೆ ತರಬೇತಿ ನೀಡುವ ಸಂಸ್ಥೆ APOPO ಮಾಹಿತಿ ಹಂಚಿಕೊಂಡಿದೆ. ಐದು ವರ್ಷಗಳಲ್ಲಿ ಮಾಗ್ವಾ 100ಕ್ಕೂ ಹೆಚ್ಚು ನೆಲಬಾಂಬುಗಳನ್ನು ಪತ್ತೆ ಮಾಡಿತ್ತು. ಮಾಗ್ವಾ ಅಪ್ರತಿಮ ಸಾಧನೆಗಾಗಿ ಗೋಲ್ಡ್​ ಮೆಡಲ್​ನ್ನು ನೀಡಲಾಗಿತ್ತು. ಈ ಇಲಿಯನ್ನು ಹೀರೋ ರಾಟ್​ ಎಂದೇ ಕರೆಯಲಾಗುತ್ತಿತ್ತು. ಇತ್ತೀಚೆಗಷ್ಟೇ 8ನೇ ವರ್ಷಕ್ಕೆ ಕಾಲಿಟ್ಟಿದ್ದ ಮಾಗ್ವಾ ವಾರಾಂತ್ಯದಲ್ಲಿ ಸಾವನ್ನಪ್ಪಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಆರಾಮವಾಗಿಯೇ ಇದ್ದ ಮಾಗ್ವಾ ಇದ್ದಕ್ಕಿದ್ದಂತೆ ಊಟ ಮಾಡುವುದನ್ನು ನಿಲ್ಲಿಸಿತ್ತು. ಕ್ರಮೇಣ ಆರೋಗ್ಯ ಕ್ಷೀಣಸಿ ಸಾವನ್ನಪ್ಪಿದೆ ಎಂದು ತಿಳಿಸಿದೆ.

ಬದುಕಿರುವವರೆಗೆ 5 ವರ್ಷಗಳ ಅವಧಿಯಲ್ಲಿ 2,25,000 ಚದರ ಕಿಮೀನಷ್ಟು ಭೂಮಿಯಲ್ಲಿ ಬಾಂಬ್​ಗಳನ್ನು ಹುಡುಕಿದೆ. 31 ಪುಟ್ಬಾಲ್​ ಕ್ರೀಡಾಂಗಣದಲ್ಲಿ 71 ಜೀವಂತ ನೆಲಬಾಂಬ್​ಗಳನ್ನು ಪತ್ತೆ ಮಾಡಿದ್ದು, 38 ನಿಶ್ಯೇಷ್ಟಿತ ಬಾಂಬ್​ಗಳನ್ನು ಗುರುತಿಸಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

RELATED ARTICLES

Related Articles

TRENDING ARTICLES