Thursday, October 31, 2024

ವಿಶ್ವದ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾಳೆ 12ರ ಪೋರಿ

ಹೆಣ್ಣು ಮಗು ಅಂದ್ರೆ ಇಂದಿಗೂ ಅದೆಷ್ಟೋ ಮನೆಗಳಲ್ಲಿ ತಾತ್ಸಾರ ತೋರಿಸುತ್ತಾರೆ. ಹೆಣ್ಣು ಮಗು ಅನ್ನುವ ಕಾರಣಕ್ಕೆ ಆಕೆಗೆ ಮನೆಯೊಳಗೆ ಹಲವು ನಿಯಮಗಳನ್ನ ವಿಧಿಸುತ್ತಾರೆ. ಅದ್ರಲ್ಲೂ ಕೆಲ ಸಂಪ್ರದಾಯಸ್ಥ ಕುಟುಂಬದಲ್ಲಂತು, ಒಂದು ಹೆಣ್ಣು ಮನೆಯಿಂದ ಹೊರ ಹೋಗಬೇಕಾದರು ಆಕೆಯ ಮನೆಯವರ ಬಳಿ ಹತ್ತು ಬಾರಿ ಅನುಮತಿ ಪಡೆಯಬೇಕು, ಒಂದು ವೇಳೆ ಆಕೆ ಮನೆಯ ನಿಯಮಗಳನ್ನ ಮುರಿದರೆ ಅವಳ ಕತೆ ಮುಗಿದಂತೆ. ಇದು ಕೇವಲ ಒಂದು ಮತ ಅಥವಾ ಒಂದು ಸಂಪ್ರದಾಯದಲ್ಲಿ ಇರುವ ವಿಚಾರವಲ್ಲ, ಜಗತ್ತಿನ ಎಲ್ಲಾ ಮತ, ಜಾತಿ, ದೇಶಗಳಲ್ಲಿ ಅತ್ಯಧಿಕವಾಗಿ ಶೋಷಣೆಗೆ ಒಳಗಾದವಳು ಕೂಡ ಹೆಣ್ಣೆ. ಈ ಆಧುನಿಕ ಯುಗದಲ್ಲಿಯೂ ಒಂದು ಹೆಣ್ಣು ಪರೋಕ್ಷವಾಗಿ ಶೋಷಣೆಗೆ ಒಳಗಾಗುತ್ತಿರೋದ್ರಲ್ಲಿ ಸುಳ್ಳಿಲ್ಲ. ಇಷ್ಟೆಲ್ಲ ಶೋಷಣೆಯ ಮಧ್ಯೆಯೂ ಇವತ್ತು ಸಾಕಷ್ಟು ಜನ ಹೆಣ್ಣು ಮಕ್ಕಳು ಸೇನೆಯಿಂದ ಹಿಡಿದು ಬಾಹ್ಯಾಕಾಶದವರೆಗೂ ತಮ್ಮ ಸೇವೆಯನ್ನ ಸಲ್ಲಿಸುತ್ತಾ ಬಂದಿದ್ದಾರೆ.

ಉದಾಹರಣೆಗೆ ಈಕೆಯ ಹೆಸರು ಇವ್ನಿಕ ಸಾವಕಾಸ್​.. ಈಕೆಗೆ ಕೇವಲ 12 ವರ್ಷ.. ಆದ್ರು ತಾನು ಯಾವ ಯುವಕನಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ಈಕೆ ಮರಕ್ಕೆ ಗುದ್ದುತ್ತಿದ್ದಾಳೆ. ಹೀಗೆ ಮರಕ್ಕೆ ಗುದ್ದುತ್ತಿರುವುದನ್ನ ನೋಡಿದ ಕೆಲವರು, ಮೊದಲು ಈಕೆಗೆ ಹುಚ್ಚು ಹಿಡಿದಿದೆ ಎಂದು ಹಿಯಾಳಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈಕೆಯ ಬಗ್ಗೆ ನೆಗೆಟಿವ್​ ಕಮೆಂಟ್​​ಗಳನ್ನಮಾಡುತ್ತಿದ್ದರು, ಆದ್ರೆ ಅವತ್ತು ಹಾಗೆ ಈಕೆಯ ಬಗ್ಗೆ ನೆಗೆಟಿವ್​ ಆಗಿ ಮಾತನಾಡಿದವರೇ ಇವತ್ತು ಈಕೆಯನ್ನ ಹಾಡಿ ಹೊಗಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈಕೆ ಇವತ್ತು ವಿಶ್ವದ ಗಮನ ಸೆಳೆದಿದ್ದಾಳೆ.

ಈ ಹನ್ನೇರಡರ ಪೋರಿ ಮಾಡಿರುವ ಸಾಧನೆ ಯಾವ ಯುವಕರಿಗಿಂತಲೂ ಕಮ್ಮಿ ಇಲ್ಲ. ಇಂದಿಗೂ ಈಕೆ ಬಾಕ್ಸಿಂಗ್ ಮತ್ತು ಶಕ್ತಿಯನ್ನು ಪ್ರದರ್ಶಿಸುವ ಅಸಾಮಾನ್ಯ ಸಾಹಸಗಳನ್ನು ಮಾಡುತ್ತಿದ್ದು, ಜಗತ್ತಿನ ಹಲವು ರಾಷ್ಟ್ರದ ಜನರು ಈಕೆಯನ್ನ ‘ವಿಶ್ವದ ಬಲಿಷ್ಠ ಹುಡುಗಿ’ ಎಂದು ಕರೆಯುತ್ತಿದ್ದಾರೆ. ಈ ಹುಡುಗಿಯ ಇಷ್ಟು ದೊಡ್ಡ ಸಾಧನೆಗೆ ಪ್ರಮುಖ ಕಾರಣ ಅಂದ್ರೆ ಅದು ಆಕೆಯ ತಂದೆ. ಸಣ್ಣ ವಯಸ್ಸನಲ್ಲೇ ತನ್ನ ಮಗಳ ಪ್ರತಿಭೆಯನ್ನ ಗುರುತಿಸಿದ ರುಸ್ಟ್ರಾಮ್ ಸಾದ್ವಾಕಾಸ್, ತನ್ನ ಮಗಳು ಇವ್ನಿಕಗೆ ಬಾಕ್ಸಿಂಗ್​ ತರಬೇತಿಯನ್ನ ನೀಡೋದಕ್ಕೆ ಶುರು ಮಾಡ್ತಾರೆ..ಹೀಗೆ ಈ ಯುವತಿಯ ನಿರಂತರ ತರಬೇತಿಯ ಪರಿಣಾಮವಾಗಿ ಈಕೆ ಯಾರು ಊಹಿಸದ ಸಾಧನೆಯನ್ನ ಮಾಡುತ್ತಿದ್ದಾಳೆ, 5 ವರ್ಷಗಳ ಹಿಂದೆ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ 100 ಪಂಚ್‌ಗಳನ್ನ ಈ ಯುವತಿ ಮಾಡಿದ್ದಳು.ಆ ಮೂಲಕ ಗಿನ್ನೀಸ್​ ದಾಖಲೆಯನ್ನ ಕೂಡ ಯುವತಿ ಮಾಡಿದ್ದಳು. ಆಗ ಈಕೆಯ ವಯಸ್ಸು ಕೇವಲ 8 ವರ್ಷಗಳು ಮಾತ್ರ.

ಹಲವು ವರದಿಗಳ ಪ್ರಕಾರ ಇವ್ನಿಕಾ ಹಾಗು ಆಕೆಯ ಒಡಹುಟ್ಟಿದವರು ತಮ್ಮ ಮನೆಯ ಸುತ್ತಲಿನ ಕಾಡಿನಲ್ಲಿ ತರಬೇತಿ ಪಡೆಯುತ್ತಾರೆ. ಹೀಗೆ ತರಬೇತಿ ಪಡೆಯೋದಕ್ಕೆ ಇವ್ನಿಕಳ ತಂದೆ ರುಸ್ಟ್ರಾಮ್ ಸಾದ್ವಾಕಾಸ್ ಮರಗಳಿಗೆ ಗುದ್ದುವ ತರಬೇತಿಯನ್ನ ನೀಡುತ್ತಿದ್ದಾರೆ. ಹೀಗೆ ಹೊರಗೆ ಬಂದಾಗಲೆಲ್ಲಾ ಅವರು ಗುದ್ದುವ ಚೀಲಗಳಾಗಿ ಮರಗಳನ್ನು ಬಳಸುತ್ತಾರೆ. ಆ ಮೂಲಕ ಹಲವು ಬಾರಿ ಸಣ್ಣ ಮರವನ್ನು ತನ್ನ ಮುಷ್ಠಿಯಿಂದ ಗುದ್ದಿ ಈ ಯುವತಿ ಬೀಳಿಸಿದ್ದಾಲೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಾಲಕಿ ಈ ಹಿಂದೆಯೂ ಕೂಡ ಹಲವು ವೇದಿಕೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ತನ್ನ ಶಕ್ತಿ ಪ್ರದರ್ಶನವನ್ನ ಮಾಡಿದ್ದಳು, ತನ್ನ ಪ್ರತಿಭೆ ಏನು ಅನ್ನೋದನ್ನ ಇಡೀ ಜಗತ್ತಿಗೆ ಪರಿಚಯಿಸಿದ್ದಳು.. ಇದೀಗ ಮತ್ತೆ ಈ ಯುವತಿ ಬೇರೆ ಬೇರೆ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು.. ಈಕೆಯ ತಂದೆಯ ಬಳಿ ತಮ್ಮ ಹೆಣ್ಣು ಮಕ್ಕಳಿಗೂ ತರಬೇತಿಕೊಡುವಂತೆ ಹಲವು ಸ್ಥಳೀಯರು ಮನವಿಯನ್ನ ಮಾಡಿದ್ದಾರಂತೆ..

ಸದ್ಯಕ್ಕೆ ತಾನು ಹೆಣ್ಣು ತನ್ನಿಂದ ಏನು ಸಾಧ್ಯವಾದ್ದು ಎಂದುಕೊಳ್ಳುವ ಅದೆಷ್ಟೋ ಹೆಣ್ಣು ಮಕ್ಕಳಿಗೆ ಈಕೆಯ ಸಾಧನೆ ದಾರಿ ತೋರಿಸಿದರು ಅಚ್ಚರಿಯಿಲ್ಲ. ಇನ್ನು ಕೆಲ ಪೋಷಕರು ಅಷ್ಟೇ ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನ ಕೊಡಿಸುವುದರ ಜೊತೆಗೆ, ಅವರಿಗೆ ರಕ್ಷಣಾತ್ಮಕ ಕಲೆಯನ್ನ ಕೂಡ ಕಲಿಸಬೇಕು. ಆ ಮೂಲಕ ಹೆಣ್ಣು ಮಕ್ಕಳ ಸರ್ವತೋಮುಕ ಬೆಳವಣಿಗೆಗೆ ಪೋಷಕರೇ ಅಡಿಪಾಯವನ್ನ ಹಾಕಬೇಕಾದ ಜವಬ್ದಾರಿಯನ್ನ ಹೊರಬೇಕಾಗಿದೆ.

ಲಿಖಿತ್​​ ರೈ, ಪವರ್​​ ಟಿವಿ

RELATED ARTICLES

Related Articles

TRENDING ARTICLES