Thursday, December 19, 2024

ವಿಕೇಂಡ್ ಕರ್ಫ್ಯೂ ವಿರುದ್ಧ ಸಿಡಿದೆದ್ದ ಹೋಟೆಲ್ ಮತ್ತು ಮಾಲೀಕರ ಸಂಘಟನೆಗಳು

ಬೆಂಗಳೂರು :ವಿಕೇಂಡ್ ಕರ್ಫ್ಯೂ ವಿರುದ್ಧ ಸಿಡಿದೆದ್ದ ಹೋಟೆಲ್ ಮತ್ತು ಮಾಲೀಕರ ಸಂಘಟನೆಗಳು,ವಾರದಿಂದ ವಿಕೇಂಡ್ ಕರ್ಫ್ಯೂ ಬಹಿಷ್ಕರಿಸಲು ತೀರ್ಮಾನಿಸಿದೆ.

ಈ ವಾರ ವೀಕೆಂಡ್ ಕರ್ಫ್ಯೂ ಪಾಲಿಸುತ್ತೇವೆ,ಸರ್ಕಾರ ಮುಂದಿನ ವಾರದೊಳಗೆ ವೀಕೆಂಡ್ ಕರ್ಫ್ಯೂ ಹಿಂಪಡೆಯಬೇಕು.ಎಂದು ಸರ್ಕಾರಕ್ಕೆ ಹೋಟೆಲ್, ಬಾರ್ ಮಾಲೀಕರು ಡೆಡ್ ಲೈನ್ ಕೊಟ್ಟಿದ್ದಾರೆ.
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಹೋಟೆಲ್ ತೆರದೇ ತೆರಯುತ್ತೇವೆ,ಎಲ್ಲರಿಗೂ ಒಂದು ನ್ಯಾಯ ನಮಗೆ ಯಾವಾಗಲೂ ಅನ್ಯಾಯ ಎಂದು ಹೋಟೆಲ್ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಾರದ ವಿಕೇಂಡ್ ಕರ್ಫ್ಯೂ ನಂತರ ನಾವು ಸರ್ಕಾರದ ತಿರ್ಮಾನವನ್ನ ದಿಕ್ಕರಿಸುತ್ತೇವೆ,ಕೂಡಲೇ ನೈಟ್ ಕರ್ಫ್ಯೂ ವಿಕೇಂಡ್ ಕರ್ಫ್ಯೂ ತೆಗೆದು ಹಾಕಿ,ಹೋಟೆಲ್ ಬಾರ್ ಮಾಲೀಕರನ್ನ‌ ಬದುಕಲು ಬಿಡಿ ಎಂದು ಸರ್ಕಾರದ ವಿರುದ್ಧ ಉದ್ಯಮಿಗಳು ಸಿಡಿದೆದ್ದಿದ್ದಾರೆ.

RELATED ARTICLES

Related Articles

TRENDING ARTICLES