ಬೆಂಗಳೂರು : ಕೊರೋನಾ ಕಂಟ್ರೋಲ್ಗೆ ಲಾಕ್ಡೌನ್ ಆಗೋದು ಫಿಕ್ಸ್,ರಾಜ್ಯದ ಜನರೇ ಮತ್ತೊಂದು ಲಾಕ್ಡೌನ್ಗೆ ಸಿದ್ಧರಾಗಿ ಫೆಬ್ರವರಿಯಲ್ಲಿ 1 ಲಕ್ಷ ಸನಿಹಕ್ಕೆ ಕೊರೋನಾ ಕೇಸ್ ಬರುವ ಸಾಧ್ಯತೆ ಇರೋದರಿಂದ ಲಾಕ್ಡೌನ್ ಫಿಕ್ಸ್ ಆಗಲಿದೆ.
ಮಿತಿ ಮೀರುತ್ತಿದೆ ಕೊರೋನಾ ಅಟ್ಟಹಾಸ, ಸಿಲಿಕಾನ್ ಸಿಟಿಯಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿಯಾಗುತ್ತಾ, ಫೆಬ್ರವರಿ ಮೊದಲ ವಾರದಲ್ಲಿ ಬೀಗ ಬೀಳೋದು ಪಕ್ಕಾನಾ ಅಗತ್ಯ ವಸ್ತುಗಳು ಹೊರತುಪಡಿಸಿ ಎಲ್ಲಾವೂ ಬಂದ್ ಆಗುತ್ತಾ..? ಮೊದಲಿಗೆ ಸೆಮಿ ಲಾಕ್ಡೌನ್ ಆಯ್ತು.. ಇದೀಗ ಲಾಕ್ಡೌನ್ ಜಪ..? ಪಕ್ಕನಾ ಎಂದು ಪ್ರಶ್ನೆಯಾಗಿಯೇ ಉಳಿದಿದೆ.
ಸೋಂಕಿತರ ಸಂಖ್ಯೆ ಹೆಚ್ಚಾದರೆ ಮೆಡಿಕಲ್ ಎಮರ್ಜೆನ್ಸಿ ಅಗತ್ಯ ವಸ್ತುಗಳ ಖರೀದಿಗೆ ಟೈಮ್ ಫಿಕ್ಸ್ ಆಗುತ್ತಾ..? ಅಥವಾ ಮುಂದಿನ ವಾರದಲ್ಲಿ ಪ್ರತಿದಿನ 25 ಸಾವಿರ ಕೇಸ್ಗಳಾಗುತ್ತಾ.? ಮತ್ತಷ್ಟು ಕಠಿಣ ನಿರ್ಬಂಧಗಳ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಿಲಿಕಾನ್ ಸಿಟಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಮತ್ತು ಬಿಬಿಎಂಪಿಯಿಂದ ಪ್ರತ್ಯೇಕ ಗೈಡ್ ಲೈನ್ಸ್ ಗೆ ಸಿದ್ಧತೆ ಮಾಡಲಾಗಿದ್ದು, ಲಾಕ್ ಡೌನ್ ಮಾದರಿಯ ಕಠಿಣ ನಿರ್ಬಂಧಗಳ ಜಾರಿಗೆ ಸಿದ್ಧತೆಯನ್ನು ನಡೆಸುತ್ತಿದೆ.
==========