Monday, December 23, 2024

ನಟ ಅಕ್ಷಯ್ ಕುಮಾರ್​​ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ !

ಬಾಲಿವುಡ್​ನಲ್ಲಿ ಸಖತ್​ ಡಿಮ್ಯಾಂಡ್​​ ಇರುವ ನಟ ಅಂದ್ರೆ ಅದು ಅಕ್ಷಯ್​ ಕುಮಾರ್​. ಸಿನಿಮಾ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು ಇವರ ಕಾಲ್​ಶೀಟ್​ಗಾಗಿ ಕಾಯುತ್ತಿರುತ್ತಾರೆ. ಕಾರಣ ಸದ್ಯ ಇವರ ಸಿನಿಮಾಗಳ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸೌಂಡ್​​ ಮಾಡ್ತಾವೆ.

ಎಂತಹ ಕಷ್ಟದ ಸಂದರ್ಭದಲ್ಲಿಯೂ ನಟ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಮಿನಿಮಮ್ ಬಿಜಿನೆಸ್ ಖಂಡಿತ ಮಾಡುತ್ತದೆ ಎಂಬ ನಂಬಿಕೆಯು ಬಾಲಿವುಡ್ ನಿರ್ಮಾಪಕರಿಗೆ ಇದೆ​. ಆದ್ದರಿಂದಲೇ ನಿರ್ಮಾಪಕರ ಪಾಲಿಗೆ ಅಕ್ಷಯ್ ಕುಮಾರ್ ನೆಚ್ಚಿನ ಹೀರೋ ಆಗಿದ್ದಾರೆ. ಈಗ ಅವರ ಹೊಸ ಸಿನಿಮಾ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹರಿದಾಡುತ್ತಿದೆ.

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಆ ಚಿತ್ರಕ್ಕೆ ಅವರು ಬರೋಬ್ಬರಿ 170 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಬಾಲಿವುಡ್​ ಅಂಗಳದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತವೆ ಎಂಬುದರಲ್ಲಿ ಅನುಮಾನವೇ ಬೇಡ. ಹಾಗಾಗಿ ಅವರು ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಮುಂದಿರುತ್ತಾರೆ. ಆದರೆ ಈ ಬಾರಿ ಅಕ್ಷಯ್ ಕುಮಾರ್ ಡಿಮ್ಯಾಂಡ್ ಮಾಡುತ್ತಿರುವುದು ಬಹಳ ದೊಡ್ಡ ಮೊತ್ತ ಎನ್ನಲಾಗಿದೆ.

RELATED ARTICLES

Related Articles

TRENDING ARTICLES