Wednesday, January 22, 2025

ವಿಕ್ರಾಂತ್​ ರೋಣನಿಗೂ ಮೊದ್ಲೇ ‘ಅಶ್ವತ್ಥಾಮ’ ಸೌಂಡ್

ಭಾರತೀಯ ಚಿತ್ರರಂಗದ ಹೈವೋಲ್ಟೇಜ್ ಸಿನಿಮಾ ವಿಕ್ರಾಂತ್ ರೋಣ. ಸುದೀಪ್ ಲೀಡ್ ರೋಲ್ ಹಾಗೂ ಅನೂಪ್ ಭಂಡಾರಿ ಡೈರೆಕ್ಟೋರಿಯಲ್​ನಲ್ಲಿ ಮೂಡಿಬರ್ತಿರೋ ಈ ಚಿತ್ರಕ್ಕೆ ಸಿನಿಪ್ರಿಯರೆಲ್ಲಾ ಸಿಕ್ಕಾಪಟ್ಟೆ ಕಾತರರಾಗಿದ್ದಾರೆ. ಈ ಮೋಸ್ಟ್ ಅವೇಯ್ಟೆಡ್ ಸಿನಿಮಾ ತೆರೆಗಪ್ಪಳಿಸೋಕೂ ಮೊದ್ಲೇ ಕಿಚ್ಚ- ಅನೂಪ್ ಜೋಡಿ ಮತ್ತೊಂದು ಬಿಗ್ ಸರ್​ಪ್ರೈಸ್ ಕೊಡಲು ಸಜ್ಜಾಗಿದೆ. ಅದೇನು ಅನ್ನೋದ್ರ ಸ್ಪೆಷಲ್ ಝಲಕ್ ಇಲ್ಲಿದೆ ಕಣ್ತುಂಬಿಕೊಳ್ಳಿ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಸದ್ಯ ವಿಕ್ರಾಂತ್ ರೋಣನ ಜಪ ಜೋರಾಗಿದೆ. ಈ ಚಿತ್ರ ಸೆಟ್ಟೇರಿದ ದಿನದಿಂದ್ಲೂ ಒಂದಲ್ಲಾ ಒಂದು ವಿಶೇಷತೆಗಳಿಂದಾಗಿ ಸದ್ದು ಮಾಡುತ್ತಲೇ ಇದೆ. ಮುಖ್ಯವಾಗಿ ಇದು ಸುದೀಪ್ ನಟನೆಯ ಚಿತ್ರ, ಅನೂಪ್ ಭಂಡಾರಿ ಅವ್ರ ನಿರ್ದೇಶನ, ಫ್ಯಾಂಟಸಿ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಬ್ಜೆಕ್ಟ್, ಬಿಗ್ ಸ್ಟಾರ್ ಕಾಸ್ಟ್​, ಹಾಲಿವುಡ್​ ರೇಂಜ್​ಗೆ ಇರೋ ಮೇಕಿಂಗ್ ಸ್ಟೈಲ್ ಇವೆಲ್ಲಾ ಕಾರಣಗಳಿಂದ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.

ಸುದೀಪ್ ಅವ್ರ ವಿಕ್ರಾಂತ್ ರೋಣನ ಲುಕ್ ಈಗಾಗ್ಲೇ ಎಲ್ಲರ ಹುಬ್ಬೇರಿಸಿದೆ. ಜೊತೆಗೆ ಬಿ. ಅಜನೀಶ್ ಲೋಕನಾಥ್ ಅವ್ರ ಪವರ್​ಫುಲ್ ಬ್ಯಾಕ್​ಗ್ರೌಂಡ್ ಮ್ಯೂಸಿಕ್ ಇರೋ ಚಿತ್ರದ ಟೀಸರ್ ಕೂಡ ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ಅಲ್ಲದೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಜಾಕ್ ಮಂಜು ಚಿತ್ರವನ್ನು ನಿರ್ಮಿಸಿದ್ದಾರೆ.

ಸುದೀಪ್ ಸಿನಿಮಾಗಳು ಅಂದ್ರೆ ಅಲ್ಲಿ ಸಂಥಿಂಗ್ ಸ್ಪೆಷಾಲಿಟಿ ಇದ್ದೇ ಇರುತ್ತದೆ. ಅದಕ್ಕೆ ಅವ್ರ ಈ ಹಿಂದಿನ ಸಿನಿಮಾಗಳೆ ಸಾಕ್ಷಿ. ಇನ್ನೂ ನಿರ್ದೇಶನ ಅನೂಪ್ ಭಂಡಾರಿ ಕೂಡ ಸೂಪರ್ ಹಿಟ್ ಸಿನಿಮಾಗಳನ್ನು ಡೈರೆಕ್ಟ್ ಮಾಡೋ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ಸ್ಟಾರ್​ ಡೈರೆಕ್ಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಜೋಡಿಯ ವಿಕ್ರಾಂತ್ ರೋಣ ಚಿತ್ರ ಹೇಗಿರಲಿದೆ ಅನ್ನೋ ಕುತೂಹಲ ಸಿನಿಪ್ರಿಯರಲ್ಲಿ ಮನೆ ಮಾಡಿದೆ. ಆದ್ರೆ ಈ ಚಿತ್ರ ರಿಲೀಸ್​ಗೂ ಮುನ್ನವೇ ಸುದೀಪ್ ಅಂಡ್ ಅನೂಪ್ ಅವ್ರ ಕಡೆಯಿಂದ ಬಿಗ್ ನ್ಯೂಸ್​ವೊಂದು ಹೊರಬಿದ್ದಿದೆ.

ವಿಕ್ರಾಂತ್ ರೋಣ ಬಿಗ್​ಸ್ಕ್ರೀನ್​ನಲ್ಲಿ ಅಬ್ಬರಿಸೋಕೂ ಮೊದ್ಲೇ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಶನ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಹಿಂದೆ ನಿರ್ದೇಶಕ ಅನೂಪ್ ಸುದೀಪ್ ಅವ್ರ ಜೊತೆಗೆ ಅಶ್ವತ್ಥಾಮ ಅನ್ನೋ ಟೈಟಲ್​ನಲ್ಲಿ ಸಿನಿಮಾ ಮಾಡಲು ನಿರ್ಧರಿಸಿ, ಒಂದು ಫಸ್ಟ್​ಲುಕ್ ಪೋಸ್ಟರ್​ನ್ನೂ ರಿವೀಲ್ ಮಾಡಿದ್ರು.

ಅಶ್ವತ್ಥಾಮ ಚಿತ್ರದ ಆ ಪೋಸ್ಟರ್​ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆದ್ರೆ ಈ ಚಿತ್ರಕ್ಕೂ ಮೊದಲೇ ವಿಕ್ರಾಂತ್ ರೋಣ ಸಿನಿಮಾ ಟೇಕ್ ಆಫ್ ಆಗ್ಬಿಟ್ಟಿತ್ತು. ಇದೀಗ ಈ ಸಿನಿಮಾ ತೆರೆ ಕಾಣಲು ಸಜ್ಜಾಗಿರೋ ಟೈಮ್​ನಲ್ಲಿ ಮತ್ತೆ ಅಶ್ವತ್ಥಾಮ ಸಿನಿಮಾ ಬಗ್ಗೆ ಜೋರಾದ ಟಾಕ್ ಶುರುವಾಗಿದೆ. ಸೌತ್​ನ ದೊಡ್ಡ ಪ್ರೊಡಕ್ಷನ್​ ಸಂಸ್ಥೆಗಳು ಹಾಗೂ ಬಾಲಿವುಡ್​ ಹೆಸರಾಂತ ಇರೋಸ್ ಪ್ರೊಡಕ್ಷನ್ ಕಂಪನಿ ಕೂಡ ಅಶ್ವತ್ಥಾಮ ಚಿತ್ರವನ್ನು ತಮಗೆ ಮಾಡಿಕೊಡುವಂತೆ ಭಾರೀ ಬೇಡಿಕೆ ಇಟ್ಟಿವೆ.

ಸದ್ಯ ಅನೂಪ್ ಭಂಡಾರಿ ಅಂಡ್ ಟೀಮ್ ವಿಕ್ರಾಂತ್ ರೋಣ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಳ್ತಿದೆ. ವಿಕ್ರಾಂತ್ ರೋಣ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರ್ತಿದ್ದು, ಫೆಬ್ರವರಿ 24ಕ್ಕೆ ವರ್ಲ್ಡ್​ವೈಡ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ವಿಕ್ರಾಂತ್ ರೋಣ ಸಿನಿಮಾ ತೆರೆಕಂಡ ಬಳಿಕ ಅಶ್ವತ್ಥಾಮ ಚಿತ್ರದ ಬಗ್ಗೆ ಚಿತ್ರತಂಡ ಗಮನಹರಿಸಲಿದೆ ಅನ್ನಲಾಗ್ತಿದೆ. ಒಟ್ಟಾರೆ ಸುದೀಪ್ ಅಂಡ್ ಅನೂಪ್ ಕಾಂಬಿನೇಶನ್​ ಮುಂದಿನ ಸಿನಿಮಾ ಕುರಿತು ಹರಿದಾಡ್ತಿರೋ ಸುದ್ದಿ ಕೇಳಿ ಕಿಚ್ಚನ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

RELATED ARTICLES

Related Articles

TRENDING ARTICLES