ಬೆಂಗಳೂರು : ಕಳೆದ ಎರಡು ಅಲೆಗಳಲ್ಲಿ ಶಾಲಾ ಕಾಲೇಜನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆದರೆ ಈ ಭಾರಿ ಪಾಸಿಟಿವಿಟಿ ರೇಟ್ ನೋಡಿಕೊಂಡು ಅಯಾ ಜಿಲ್ಲೆ, ತಾಲೂಕು ಮಟ್ಟದ ಶಾಲೆಗಳನ್ನ ಕ್ಲೋಸ್ ಮಾಡಲು ನಿರ್ಧಾರಿಸಲಾಗಿದೆ.
ಡಿಸಿ, ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಕ್ಕಿಲ್ಲ.ಹೀಗಾಗಿ ಶಾಲೆಗಳನ್ನ ಬಂದ್ ಮಾಡದಿರಲು ನಿರ್ಧಾರಿಸಲಾಗಿದೆ. ಪಾಸಿಟಿವಿಟಿ ರೇಟ್ ಹೆಚ್ಚಾಗಿರುವ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳ ಶಾಲೆ ಮಾತ್ರ ಬಂದ್ ಆಗಲಿದೆ.ಆದರೆ ಶಾಲೆ ಬಂದ್ ಆದರೂ, ಆನ್ ಲೈನ್ ಹಾಗೂ ವಿದ್ಯಾಗಮದ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡುವಂತೆ ಸಲಹೆಯನ್ನು ನೀಡಲಾಗಿದೆ.
ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳಿಂದ ಮಾಹಿತಿ ಪಡೆದ ಶಿಕ್ಷಣ ಸಚಿವ ಬಿಸಿ ನಾಗೇಶ್,ಬೆಂಗಳೂರು ನಗರ, ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಶಾಲೆ ಬಂದ್ ಮುಂದುವರಿಕೆ ಮಾಡಲಾಗಿದೆ. ಶಾಲೆ ನಡೆಯುತ್ತಿರುವ 10 ,11 ಹಾಗೂ 12 ನೇ ತರಗತಿ ಮಕ್ಕಳಿಗೆ ಸುರಕ್ಷಿತವಾಗಿ ತರಗತಿ ನಡೆಸುವಂತೆ ಸಲಹೆಯನ್ನು ನೀಡಿದ್ದಾರೆ.