ಗದಗ : ಸರ್ಕಾರದ ನಿರ್ಧಾರಕ್ಕೆ, ಟ್ಯಾಕ್ಸಿ,ಚಾಲಕರ ಹಾಗೂ ಮಾಲಿಕರ ಸಂಘ ವೀಕೆಂಡ್ ಕರ್ಫ್ಯೂ ವಿರೋಧಿಸಿದ್ದಾರೆ.
ವಿಕೇಂಡ್ ಇದ್ದಾಗಲೇ ನೌಕರಸ್ಥರು ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ತೆರಳುತ್ತಾರೆ.ನಮ್ಮ ವಾಹನ ಬಾಡಿಗೆ ತಗೊಳ್ಳುತ್ತಾರೆ.ದುಡಿಮೆಗೂ ದಾರಿ ಆಗುತ್ತೆ,ಆದರೆ ವೀಕೆಂಡ್ ಕರ್ಫ್ಯೂ ಹಿನ್ನಲೆ ಖಾಸಗಿ ಕಾರ್ಯಕ್ರಮ ರದ್ದುಗೊಳ್ಳುತ್ತವೆ,ಇದರಿಂದ ನಮ್ಮ ದುಡಿಮೆಗೂ ಬ್ರೆಕ್ ಹಾಕಿದಂತಾಗುತ್ತೆ.ಲಾಕ್ಡೌನ್ ನಂತರ ಇದೀಗ ಚೇತರಿಕೆ ಕಾಣುತ್ತಿದ್ದೇವೆ ಎಂದು ಹೇಳಿದರು.
ಇದೀಗ ಮತ್ತೇ ಈ ರೀತಿ ಮತ್ತೆ ದುಡಿಮೆ ನಿಂತು ಹೋದರೆ ನಮಗೆ ಆತ್ಮಹತ್ಯೆಯೊಂದೇ ದಾರಿ,ಮನೆ ಮುಂದೆ ಬಂದು ಸಾಲಗಾರರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಸಂಘ ಸಂಸ್ಥೆಗಳಿಂದ ಕಂತಿನ ರೂಪದಲ್ಲಿ ಸಾಲ ಮಾಡಿದ್ದೇವೆ,ಹೀಗೆ ದುಡಿಮೆ ನಿಂತರೆ ನಮ್ಮ ಜೀವನ ನಡೆಯೋದು ಹೇಗೆ ಎಂದು ಟ್ಯಾಕ್ಸಿ ಹಾಗೂ ಕಾರು ಚಾಲಕರು ತಮ್ಮ ಭಾವನೆ ವ್ಯಕ್ತ ಪಡಿಸಿದ್ದಾರೆ.