Monday, December 23, 2024

ಪ್ರವಚನಕ್ಕೆ ಬಂದಿದ್ದ ವೇಳೆ ಜಾರಿ ಬಿದ್ದ ಸಿದ್ದೇಶರ ಸ್ವಾಮೀಜಿಗೆ ಗಂಭೀರ ಗಾಯ

ಚಿಕ್ಕೋಡಿ : ವಿಜಯಪುರದ ಜ್ಞಾನಾಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸ್ನಾನ ಗೃಹದಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಕಾಲಿಗೆ ಗಂಭೀರ ಪ್ರಮಾಣದ ಗಾಯವಾಗಿದೆ.

ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಇಂದಿನಿಂದ ಆಧ್ಯಾತ್ಮಿಕ ಪ್ರವಚನ ನೀಡಲು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ವಿಜಯಪುರದಿಂದ ಆಗಮಿಸಿದ್ದರು. ಹೀರೆಕೋಡಿಯ ಮಗದುಮ್ಮ ಫಾರ್ಮ್ ಹೌಸ್​ನಲ್ಲಿ ತಂಗಿದ್ದರು. ಸ್ನಾನ ಗೃಹಕ್ಕೆ ಹೋಗಿರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಕಾಲಿಗೆ ಗಾಯವಾಗಿದೆ. ಕಾಲು ಜಾರಿ ಬಿದ್ದ ಸಿದ್ದೇಶ್ವರ ಸ್ವಾಮೀಜಿಗಳನ್ನು ಮಹರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿಮಠದ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಶ್ರೀಗಳ ಕಾಲಿಗೆ ಗಂಭೀರ ಪ್ರಮಾಣದ ಗಾಯವಾದ ಹಿನ್ನೆಲೆಯಲ್ಲಿ ಪ್ರವಚನ ಕಾರ್ಯ ರದ್ದು ಮಾಡಲಾಗಿದೆ.

RELATED ARTICLES

Related Articles

TRENDING ARTICLES