Monday, January 27, 2025

ತಾಯಿ ಹುಲಿಯ ವಾತ್ಸಲ್ಯ ಚಿತ್ರಿಸಿದ :ಸುಬ್ಬಯ್ಯ ನಲ್ಲಮುತ್ತು

ದೇಶ : ತಾಯಿ ಪ್ರೀತಿಯೇ ಹಾಗೆ. ನಿಷ್ಕಲ್ಮಶ, ಶುದ್ಧ ಪ್ರೀತಿ. ಅದು ಮನುಷ್ಯರಿಗಷ್ಟೇ ಅಲ್ಲ. ಪ್ರಾಣಿಗಳೂ ಕೂಡ ಅನ್ವಯಿಸುತ್ತೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹ ತಾಯಿ ಮತ್ತು ಮರಿಯ ಪ್ರೀತಿಯ ವಿಡಿಯೋ ವೈರಲ್​ ಆಗಿದೆ.

ತಾಯಿ ಹುಲಿಯನ್ನು ಮರಿ ಪ್ರೀತಿಯಿಂದ ಮುದ್ದಾಡುವ ವಿಡಿಯೋ ವೈರಲ್​ ಆಗಿದೆ. ಈ ಅಪರೂಪದ ವಿಡಿಯೋವನ್ನು ಪ್ರಶಸ್ತಿ ವಿಜೇತ ನಿರ್ದೇಶಕ, ನಿರ್ಮಾಪಕ ಹಾಗೂ ಸಿನಿಮಾಟೋಗ್ರಾಫರ್​ ಸುಬ್ಬಯ್ಯ ನಲ್ಲಮುತ್ತು ಚಿತ್ರೀಕರಿಸಿದ್ದರು. ಅವರು 2021ರ ಡಿಸೆಂಬರ್​ 31 ರಂದು ವಿಡಿಯೋ ಹಂಚಿಕೊಂಡಿದ್ದರು. ಅದಾದ ಬಳಿಕ ಈಗ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಧಾ ರಮೇನ್​ ಮತ್ತೊಮ್ಮೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

RELATED ARTICLES

Related Articles

TRENDING ARTICLES