Monday, May 20, 2024

ಮೇಕೆದಾಟು ಯೋಜನೆಗಾಗಿ ಮುಂದುವರೆದ ಕಾಂಗ್ರೆಸ್ ಪಾದಯಾತ್ರೆ

ರಾಮನಗರ : ಹಾಸನದಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ಕೈ ಕಾರ್ಯಕರ್ತರು ಇಂದು ಚನ್ನರಾಯಪಟ್ಟಣ ತಾಲ್ಲೂಕಿನ ಕಿರಿಸಾವೆ ಬಳಿಯ ಗಡಿ ಆಂಜನೇಯ ಸ್ವಾಮಿ ದೇಗುಲದಿಂದ ನಾಯಕರ ದಂಡು ಹೊರಡಲಿದೆ.

ಜಿಲ್ಲೆಯಿಂದ ಇಂದು ಸಾವಿರಾರು ಸಂಖ್ಯೆಯಲ್ಲಿ ಬಾಗಿ ಆಗ್ತಿರೋ ಕಾರ್ಯಕರ್ತರು,ನೂರಾರು ಬಸ್ ಗಳಲ್ಲಿ ಕಾರ್ಯಕರ್ತರ‌ ಜೊತೆ ಹೊರಾ ನಾಯಕರ ದಂಡು ಹೊರಡಲಿದೆ ಎಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಬಳಿ ಮಾಜಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಹೇಳಿದ್ದಾರೆ. ಹಾಸನದಿಂದ ಏಳುವರೆ ಸಾವಿರ ಜನರು ಹೊರಟಿದ್ದೇವೆ, ಸಿದ್ದರಾಮಯ್ಯ, ಡಿಕೆಶಿ ನಾಯತ್ವದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ಇದೆ. ಈ ಯೋಜನೆಯಿಂದ ಕೋಟ್ಯಾಂತರ ಜನರಿಗೆ ಅನುಕೂಲ ಆಗಲಿದೆ.

ಬಿಜೆಪಿ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ, ಇಷ್ಡು ದಿನ ಇಲ್ಲದ ಕೊರೋನವನ್ನು ಈಗ ಇದೆ ಎಂದು ಹೆದರಿಸುತ್ತಿದ್ದಾರೆ. ಆದರೆ ನಾವು ಕೊರೊನ ನಿಯಮ ಪಾಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.ನಾವು ರಾಮನನಗರದ ಚಿಕ್ಕನಹಳ್ಳಿ ಗೆ ನಾವು ಹೋಗಿ ಸೇರಿ 13ಕಿಲೊಮೀಟರ್ ಪಾದಯಾತ್ರೆ ಮಾಡುತ್ತೇವೆ. 125. ಬಸ್, 100 ಮಿನಿಬಸ್ ಸಾವಿರಾರು ಕಾರುಗಳಲ್ಲಿ ಕಾರ್ಯಕರ್ತರು ನಾಯಕರು ಹೊರಡುತ್ತೇವೆ.ಅರಸೀಕೆರೆಯ ಗಡಿ ಆಂಜನೇಯ ದೇಗುಲದ ಬಳಿ ತಿಂಡಿ ತಿಂದು ಹೊರಡಲು ಕೈ ನಾಯಕರು ಸಜ್ಜಾಗಿದ್ದಾರೆ.

RELATED ARTICLES

Related Articles

TRENDING ARTICLES