ರಾಮನಗರ : ಕಾಂಗ್ರೆಸ್ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಮೂರನೇ ದಿನದ ಪಾದಯಾತ್ರೆ ಮುಕ್ತಾಯವಾಗಿತ್ತು. ಇಂದು ಒಟ್ಟು 15 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ.
ಇನ್ನು ಇಂದಿನ ಪಾದಯಾತ್ರೆ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟಿನಲ್ಲಿ ಅಣೆಕಟ್ಟು ಕಟ್ಟಲೇಬೇಕು, ಅದಕ್ಕಾಗಿ ನಮ್ಮ ಹೋರಾಟ, ಈ ಹೋರಾಟ ಇತಿಹಾಸ ಪುಟಕ್ಕೆ ಸೇರುತ್ತಿದೆ. ಸರ್ಕಾರದಿಂದ ಯಾತ್ರೆ ತಡೆಯುವ ಎಲ್ಲ ಕೆಲಸ ಆಗುತ್ತಿದೆ. ನಾವೆಲ್ಲ ಬೆಂಗಳೂರು ಜಿಲ್ಲೆಯವರು. ಈಗ ರಾಮನಗರ ಅಂತ ಜಿಲ್ಲೆಯಾಗಿದೆ.
ಪಾಪ ಸಿದ್ದರಾಮಣ್ಣ ನನಗಿಂತ ಹದಿನೈದು ವರ್ಷ ದೊಡ್ಡವರು. ಅವರಿಗೆ ನೀವು ಬಿಡಲಿಲ್ಲ, ಅವರನ್ನು ಮಲಗುವ ಹಾಗೆ ಮಾಡಿದ್ರಿ. ಏನೇ ಆಗಲಿ ಹೋರಾಟ ಬರೀ ಡಿಕೆಗಲ್ಲ, ಯೋಜನೆ ಆಗಲೇಬೇಕು ಎಂದು ಡಿಕೆಶಿವಕುಮಾರ್ ಅವರು ಹೇಳಿದರು.