Wednesday, January 22, 2025

ಪಾದಯಾತ್ರೆಯಲ್ಲಿ ಅಧಿಕಾರಿಗಳ ಮಾತಿಗೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು

ರಾಮನಗರ : ಸರ್ಕಾರವು ಜಾರಿಗೆ ತಂದಿರುವ ಕೋವಿಡ್​ ನಿಯಾಮವಳಿಗಳನ್ನು ಬದಿಗೊತ್ತಿ ರಾಜ್ಯ ಕಾಂಗ್ರೆಸ್​ ಪಕ್ಷವು ಕುಡಿಯುವ ನೀರಿನ ಯೊಜನೆಯಾದ ಮೇಕೆದಾಟು ಯೋಜನೆಯನ್ನು ಶೀಘ್ರವೇ ಜಾರಿಗೆ ತರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಮೂರು ದಿನ ಪಾದಯಾತ್ರೆ ಯಶಸ್ವಿಗೊಂಡು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್​ವರೆಗೂ ಪಾದಯಾತ್ರೆ ನಡೆಯಲಿದೆ.

ಎರಡೆರಡೂ ಎಫ್ಐಆರ್ ದಾಖಲಾಗಿದ್ದರು ಕ್ಯಾರೆ ಎನ್ನದೇ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರಿಸಿದ್ದಾರೆ. ಹಾಗೂ ಎಫ್ಐಆರ್, ಸರ್ಕಾರದ ಎಚ್ಚರಿಕೆಗೂ ಬಗ್ಗದೇ ಕಾಂಗ್ರೆಸ್ ಪಾದಯಾತ್ರೆಯನ್ನು ಸಾಗುತ್ತಿದೆ. ಈಗಾಗಲೇ ಸಾತನೂರು ಠಾಣೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಗೃಹ ಸಚಿವರು ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಚಿವ ಡಾ ಅಶ್ವತ್ಥ್ ನಾರಾಯಣ ಅವರು ಪಾದಯಾತ್ರೆ ಬಳಿಕ ಕಾದು ನೋಡಿ ಏನು ಮಾಡುತ್ತೇವೆ ಅಂತ ಖಡಕ್​​ ಎಚ್ಚರಿಕೆ ನೀಡಿದ್ದಾರೆ . ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೈ ನಾಯಕರು ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ.

ಅಲ್ಲದೇ ಇಂದು ಪಾದಯಾತ್ರೆಗೆ ಹಾಸನ ಲೋಕಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ವಿಧಾನಸಭಾ ಕ್ಷೇತ್ರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಹಾಗೂ ಮಧ್ಯಾಹ್ನ ಕೃಷ್ಣಪುರದೊಡ್ಡಿಯಲ್ಲಿ ಭೋಜನ ಮತ್ತು ವಿಶ್ರಾಂತಿಯನ್ನು ಪಡೆಯಲು ವ್ಯವಸ್ಥೆಯಾಗಿದೆ

RELATED ARTICLES

Related Articles

TRENDING ARTICLES