Wednesday, January 22, 2025

ಸಾಲು ಸಾಲು ಹಬ್ಬಗಳಿಗೂ ತಟ್ಟಿದ ಕೊರೋನಾ ಎಫೆಕ್ಟ್

ಬೆಂಗಳೂರು : ವೈಕುಂಠ ಏಕಾದಶಿ, ಸಂಕ್ರಾಂತಿ ಹಬ್ಬಕ್ಕೂ ಕಟ್ಟುನಿಟ್ಟಿನ ನಿರ್ಬಂಧ ಮಾಡಲಾಗಿದೆ. ಅಪಾಯದ ಮಟ್ಟದಲ್ಲಿ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಮಾರ್ಗಸೂಚಿ ಬಿಡುಗಡೆಯನ್ನು ಮಾಡಲಾಗಿದೆ.

ದೇಗುಲದ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜೆ ಏರ್ಪಡಿಸಲಾಗಿದ್ದು, ಒಂದು ಬಾರಿಗೆ 50 ಜನರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಯಾವುದೇ ಸೇವೆ, ಇತ್ಯಾದಿಗಳಿಗೆ ಅವಕಾಶವನ್ನು ನೀಡಲಾಗುವುದಿಲ್ಲ.
ಮೆರವಣಿಗೆ, ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ ಹಾಗೆನೇ ನಗರದ ಕೆಲ ದೇಗುಲಗಳಲ್ಲಿ ಭಕ್ತರನ್ನು ನಿಷೇಧಿಸಲಾಗಿದೆ. ಹಲವು ದೇಗುಲಗಳಲ್ಲಿ ಕೊರೋನಾ ನಿಯಮದಡಿ ದರ್ಶನಕ್ಕೆ ಅವಕಾಶವನ್ನು ನೀಡಲಾಗಿದ್ದು, ಇಸ್ಕಾನ್, ಟಿಟಿಡಿಯಲ್ಲಿ ಭಕ್ತರಿಗೆ ದರ್ಶನ ಮಾಡಲು ಅವಕಾಶವನ್ನು ನೀಡಲಾಗುವುದಿಲ್ಲ, ಬದಲಿಗೆ ಆನ್ ಲೈನ್ ಮೂಲಕ ದರ್ಶನ ಮಾಡಲು ಅವಕಾಶವನ್ನು ನೀಡಲಾಗುತ್ತದೆ.

RELATED ARTICLES

Related Articles

TRENDING ARTICLES