Thursday, December 19, 2024

ಕಾರು-ಲಾರಿ ನಡುವೆ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು

ಕಾರವಾರ : ಕಾರು-ಲಾರಿ ನಡುವೆ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಹುಲಿದೇವರವಾಡದಲ್ಲಿ ನಡೆದಿದೆ.

ಅಬುಬ್ಕರ್ ಅನ್ಸಾರ್ ರೆಹಮಾನ್ 32, ಮೃತ ವ್ಯಕ್ತಿ, ಮಹಮ್ಮದ್ ಇಸಾಕ ಖಾದರ್ , ಮಹಮ್ಮದ್ ಶರೀಪ್ ಗಂಭೀರ ಗಾಯಗೊಂಡಿದ್ದು, ಮೃತ ವ್ಯಕ್ತಿ ಹಾಗೂ ಗಾಯಗೊಂಡವರು ಕೇರಳದ ಕಾಸರಕೋಡ್ ನಿವಾಸಿಗಳಾಗಿದ್ದರು. ಕುಮಟಾ ಕಡೆಯಿಂದ ಕಾರವಾರ ಕಡೆ ಚಲಿಸುತ್ತಿದ್ದ ಕಾರು, ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರ ಚಾಲಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

RELATED ARTICLES

Related Articles

TRENDING ARTICLES