Friday, November 22, 2024

ಪೇಪರ್​​ನಲ್ಲಿ ಆಹಾರ ಸೇವಿಸಿದ್ರೆ ಬರುತ್ತೆ ಕ್ಯಾನ್ಸರ್​..!

ನಮ್ಮಲ್ಲಿ ಒಂದಲ್ಲ ಒಂದು ಕಾರಣಕ್ಕೆ ಪೇಪರ್​ ಅನ್ನ ಆಹಾರಕ್ಕಾಗಿ ಬಳಸಲಾಗುತ್ತದೆ, ಅದರಲ್ಲೂ ಬಜ್ಜಿ ಬೋಂಡ ತೆರನಾದ ಆಹಾರಗಳಲ್ಲಿ ಪೇಪರ್​ ಹೆಚ್ಚಾಗಿ ಬಳಸಲಾಗುತ್ತದೆ. ಈ ಮೂಲಕ ಎಣ್ಣೆ ಅಂಶ ಬೇರ್ಪಡಿಸಿ ಆಹಾರ ತಿನ್ನಲು ಪೇಪರ್​ ಉತ್ತಮ ಎಂದು ಹಲವರು ಭಾವಿಸುತ್ತಾರೆ. ಹೀಗಾಗಿ ಭಾರತದಾದ್ಯಂತ ಹೆಚ್ಚಿನ ಖಾದ್ಯಗಳನ್ನ ಪೇಪರ್​ಗಳಲ್ಲಿ ನೀಡಲಾಗುತ್ತದೆ ಹಾಗು ಹೆಚ್ಚಿನ ಜನ ಪೇಪರ್​ಗಳ ಮುಖಾಂತರ ಆಹಾರವನ್ನ ಸೇವಿಸುತ್ತಾರೆ. ಇನ್ನು ಈ ವಿಚಾರದಲ್ಲಿ ವಿದೇಶಿಗರು ಕೂಡ ಹಿಂದುಳಿದಿಲ್ಲ. ಅವರಲ್ಲೂ ಹೆಚ್ಚಿನಾಂಶದ ಜನರು ಪೇಪರ್​ ಟಿಷ್ಯೂಗಳು, ಪೇಪರ್​ಗಳಲ್ಲಿ ರೋಲ್​ ಮಾಡಲಾದ ಆಹಾರವನ್ನ ಸೇವಿಸುತ್ತಾರೆ. ಇದು ಅಲ್ಲಿನ ಜನರಲ್ಲಿ ಈ ಹಿಂದಿನಿಂದಲೂ ಒಂದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ.

ವಿಶ್ವದ ಬಹುತೇಕ ಪ್ರದೇಶಗಳಲ್ಲಿ ಪೇಪರ್​ಗಳ ಮೂಲಕ ಆಹಾರ ಸೇವಿಸುವವರ ಸಂಖ್ಯೆ ಏನು ಕಡಿಮೆ ಇಲ್ಲ. ಆದ್ರೆ ಈ ಪೇಪರ್​ ಮೂಲಕ ಆಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮವ?, ಹೀಗೆ ಆಹಾರ​ಕ್ಕಾಗಿ ಬಳಸುವ ಪೇಪರ್​ಗಳಲ್ಲಿ ಕೆಮಿಕಲ್​ ಇರುವುದಿಲ್ಲೆವೇ? ಹೀಗೆ ಹಲವು ಪ್ರಶ್ನೆಗಳು ನಮ್ಮಲ್ಲಿ ಮೂಡದೆ ನಾವು ಈ ಪೇಪರ್​ಗಳ ಮೂಲಕ ಆಹಾರವನ್ನ ಸೇವಿಸುತ್ತೇವೆ. ಆದ್ರೆ ಇದೇ ಪೇಪರ್​ಗಳು ನಮ್ಮ ಆರೋಗ್ಯಕ್ಕೆ ಮಾರಕಚವಾಗುತ್ತದೆ ಅನ್ನೋದು ನಮ್ಮಲ್ಲಿ ಅದೆಷ್ಟೋ ಮಂದಿಗೆ ಗೊತ್ತಿಲ್ಲ. ಈ ಪೇಪರ್​ಗಳ ಮೂಲಕ ಚಹಾ, ಕಾಫಿ ಸೇವನೆ ಕೂಡ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗಳನ್ನ ತರಬಹುದು ಅಂತ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದು ಇದೀಗ ಬಿಸಿ ಪಾನೀಯ ಪ್ರಿಯರಿಗೆ ಆತಂಕ ತಂದಿದೆ.

ಅಷ್ಟಕ್ಕೂ ಈ ವಿಚಾರ ಇವಾಗ ಪ್ರವರ್ಧಮಾನಕ್ಕೆ ಬರೋದಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಖರಗ್​ಪುರ್​ನ ಐಐಟಿ ಸಂಸ್ಥೆ. ಇತ್ತೀಚೆಗಿನ ದಿನಮಾನಗಳಲ್ಲಿ ಬಹುತೇಕ ಎಲ್ಲರು ಆಹಾರ ಹಾಗು ವಿವಿಧ ಸಾಮಾಗ್ರಿಗಳಿಗಾಗಿ ಪ್ಲಾಸ್ಟಿಕ್​ ಬಳಕೆ ಮಾಡೋದು ಹೆಚ್ಚಾಗಿತ್ತು, ಈ ಪ್ಲಾಸ್ಟಿಕ್​ಗಳಿಂದಾಗಿ ಭೂಮಿಯ ಮೇಲೆ ವಾಸಿಸುವ ಸಕಲ ಜೀವರಾಶಿಗಳ ಜೀವಕ್ಕೆ ಮಾರಕವಾಗ್ತಾ ಇತ್ತು, ಅದಕ್ಕಾಗಿಯೇ ಹಲವು ದೇಶದ ಸರ್ಕಾರಗಳು ಪ್ಲಾಸ್ಟಿಕ್​ ಮೇಲೆ ನಿಷೇಧ ಹೇರಿ ಪೇಪರ್​ಗಳ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯವನ್ನ ನೀಡಿದ್ದವು, ಇದು ಹೆಚ್ಚು ಪರಿಣಾಮಕಾರಿಯಾಗಿ ಚಾಲ್ತಿಗೆ ಬಂದಿದ್ದು ಆಹಾರ ಪದಾರ್ಥಗಳು ಹಾಗು ಆಹಾರ ಖಾದ್ಯಗಳ ಬಳಕೆಯ ಮೇಲೆ ಅದರಲ್ಲೂ ಭಾರದಲ್ಲಂತು ಟೀ ಕಾಫಿ ಕುಡಿಯುವವರ ಸಂಖ್ಯೆ ಹೆಚ್ಚಿದ್ದು, ಬಹುತೇಕ ವ್ಯಾಪರಸ್ಥರು ತಮ್ಮ ಗ್ರಾಹಕರಿಗೆ ಪೇಪರ್​ ಲೋಟದಲ್ಲೇ ಟೀ ಕಾಫಿಯನ್ನ ವಿತರಿಸೋದಕ್ಕೆ ಶುರು ಮಾಡಿದ್ರು, ಇದನ್ನ ಅರಿತ ಖರಗ್ಪುರದ ಐಐಟಿ ಸಂಸ್ಥೆ ಈ ಪೇಪರ್​ ಲೋಟಗಳ ಬಳಕೆಯ ಸಾಧಕ ಬಾದಕಗಳ ಕುರಿತು ಅಧ್ಯಯನ ನಡೆಸಿತ್ತು, ಇದೀಗ ಈ ಅಧ್ಯನದಿಂದ ಜನ ಸಮಾನ್ಯರು ಒಂದು ಕ್ಷಣ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರ ಬಿದ್ದಿದೆ.

ಇತ್ತೀಚೆಗೆ ನಡೆದ ಈ ಅಧ್ಯಯನದಲ್ಲಿ, ಪೇಪರ್ ಕಪ್​​ಗಳಲ್ಲಿ ಚಹಾ ಮತ್ತು ಇತರ ಬಿಸಿ ದ್ರವಗಳನ್ನು ಕುಡಿಯುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಉಂಟು ಮಾಡುತ್ತದೆ. ಬಹುತೇಕ ಪೇಪರ್​ ಕಪ್​ ಹಾಗು ತಟ್ಟೆಗಳು ಪರಿಸರಕ್ಕೆ ಮಾರಕವಲ್ಲದಿದ್ದರು, ಆರೋಗ್ಯಕ್ಕೆ ದುಷ್ಪರಿಣಾಮ ಬೀರೋದ್ರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ವಿಜ್ಞಾನಿಗಳು, ಪೇಪರ್​ಗಳ ಮೂಲಕ ಆಹಾರ ಸೇವಿಸುವುದರಿಂದ ಸೂಕ್ಷ್ಮಜೀವಿಯ ಹಾನಿಕಾರಕ ಪ್ಲಾಸ್ಟಿಕ್ ಕೋಶಗಳು ನಮ್ಮ ದೇಹವನ್ನ ದೇಹವನ್ನ ಪ್ರವೇಶಿಸುವ ಸಾಧ್ಯತೆ ಇದೆ. ಆ ಮೂಲಕ 25,000 ಮೈಕ್ರಾನ್ ಪ್ಲಾಸ್ಟಿಕ್ ಕಣಗಳು ದ್ರವ ಪದಾರ್ಥದ ಮೂಲಕ ದೇಹವನ್ನ ಸುಲಭವಾಗಿ ಪ್ರವೇಶಿಸುತ್ತದೆ, ಅಷ್ಟೇ ಅಲ್ಲದೇ ಕ್ರೋಮಿಯಂ ಮತ್ತು ಕ್ಯಾಡ್ಮಿಯಂನಂತಹ ಹಾನಿಕಾರಕ ಲೋಹಗಳು ದೇಹದೊಳಗೆ ಸೇರಲಿದ್ದು, ಇವುಗಳ ಮೂಲಕ ಕ್ಯಾನ್ಸರ್​ ಕೂಡ ಬರುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಇದರ ಜೊತೆಗೆ ಮತ್ತೊಂದು ಮಾಹಿತಿಯನ್ನ ನೀಡಿರುವ ವಿಜ್ಞಾನಿಗಳು ಮೃದುವಾದ ಪ್ಲಾಸ್ಟಿಕ್​ ಮಿಶ್ರಿತ ಪೇಪರ್​ಗಳಲ್ಲಿ, ಪಾಲಿಥಿಲೀನ್ ಅಂಶವಿದೆ. ಹೆಚ್ಚಿನಾಂಶದಲ್ಲಿ ಈಗ ಈ ತರಹದ ಪೇಪರ್​ ಲೋಟಗಳನ್ನ ಬಳಸಲಾಗುತ್ತಿದ್ದು ಇದು ಮುಂದಿನ ದಿನಗಳಲ್ಲಿ ಜನ ಸಾಮಾನ್ಯರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆಯಾಗಿ ಆಧುನಿಕ ಬದುಕು ಜನ ಸಾಮಾನ್ಯರ ಆರೋಗ್ಯದ ಜೊತೆಗೆ ಚೆಲ್ಲಾಟವಾಡ್ತಾ ಇದ್ದು, ಮುಂದಿನ ದಿನಗಳಲ್ಲಿ ನಾವು ತಿನ್ನುವ ಸಾಮಾನ್ಯ ಆಹಾರ ಕೂಡ ವಿಷವಾಗುವ ಆತಂಕ ಜನ ಸಮಾನ್ಯರಲ್ಲಿ ಕಾಡ್ತಾ ಇರೋದಂತು ಸುಳ್ಳಲ್ಲ.

ಲಿಖಿತ್​​ ರೈ, ಪವರ್​​ ಟಿವಿ

RELATED ARTICLES

Related Articles

TRENDING ARTICLES