ರಾಜ್ಯ : ಕರೋನಾ ಕಂಟ್ರೋಲ್ಗೆ ಸರ್ಕಾರ ಕಟ್ಟುನಿಟ್ಟಿನ ನಿಯಮವನ್ನ ಕೈಗೊಳ್ತಿದೆ. ಹೀಗಿದ್ರೂ ಹೆಮ್ಮಾರಿಯ ನಾಗಲೋಟ ಮಾತ್ರ ನಿಂತೇ ಇಲ್ಲ. ಕಟ್ಟುನಿಟ್ಟಿನ ರೂಲ್ಸ್ಗಳು ಇದ್ರೂ ಕೂಡಾ ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ಸ್ಪೋಟ ಆಗ್ತಿದ್ದು, ಇನ್ನಷ್ಟು ಕಠಿಣ ನಿಯಮ ಅಗತ್ಯವಿದೆ ಅಂತ ಬಿಬಿಎಂಪಿ ಸುಳಿವು ಕೊಟ್ಟಿದೆ.
ಸಂಭಾವ್ಯ ಮೂರನೇ ಅಲೆ ಆರಂಭಕ್ಕೂ ಮುನ್ನವೇ ಬೆಂಗಳೂರಿಗೆ ಡೆಲ್ಟಾ ರೂಪಾಂತರಿ ವೈರಸ್ ಶಾಕ್ ಕೊಟ್ಟಿದ್ಯಾ ಅನ್ನೋ ಆತಂಕ ಶುರುವಾಗಿದೆ. ಯಾವುದೇ ಕಾರಣಕ್ಕೂ ಒಮೈಕ್ರಾನ್ ಸೋಂಕಿಗೆ ರಾಜ್ಯ ತುತ್ತಾಗಬಾರದು ಅಂತ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನ ಜಾರಿಗೆ ತರ್ತಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಕೊರೋನಾ ಚೈನ್ ಲಿಂಕ್ ಅನ್ನ ಬ್ರೇಕ್ ಮಾಡೋಕೆ ಮುಂದಾಗ್ತಿದೆ. ಇದೆಲ್ಲದರ ನಡುವೆನೇ ಬೆಂಗಳೂರಿನಲ್ಲಿ ನಿರೀಕ್ಷೆಗೂ ಮೀರಿ ಸೋಂಕು ಹರಡುತ್ತಿರೋದು ಬಿಬಿಎಂಪಿ ಲೆಕ್ಕಾಚಾರವನ್ನ ಬುಡಮೇಲು ಮಾಡ್ತಿದೆ, ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಐದಾರು ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗ್ತಿವೆ. ಅದ್ರಲ್ಲೂ ಬೆಂಗಳೂರು ಒಂದರಲ್ಲೇ ಪ್ರತಿ ದಿನ ಹತ್ರತ್ರ 10 ಸಾವಿರ ಕೇಸ್‌ಗಳು ಪತ್ತೆಯಾಗ್ತಿದ್ದು, ಪಾಸಿಟಿವಿಟಿ ದರ ಶೇಕಡಾ 12 ದಾಟಿದೆ. ಇದ್ರಿಂದ ಎರಡನೇ ಅಲೆಯಲ್ಲಿ ಯಾವೆಲ್ಲಾ ಬಿಗಿ ಕ್ರಮಗಳನ್ನ ಕೈಗೊಂಡಿದ್ರೋ ಅದೇ ರೀತಿಯ ಬಿಗಿ ಕ್ರಮಗಳನ್ನ ಕೈಗೊಳ್ಳಲೇಬೇಕು ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೋನಾ ಅಂಕಿ ಅಂಶ ಹೆಚ್ಚಾಗ್ತಿರೋ ಬೆನ್ನಲ್ಲೇ ಹಿರಿಯ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ನೇತೃತ್ವದಲ್ಲಿ ಒಂದು ಅಧ್ಯಯನ ನಡೆಸಲಾಯ್ತು. ಜನವರಿ 1 ರಿಂದ 7 ನೇ ತಾರೀಖಿನವರೆಗೂ ನಡೆದ ಅಧ್ಯಯನದಲ್ಲಿ ಶೇಕಡ 97ರಷ್ಟು ಮಂದಿ ಲಸಿಕೆ ಪಡೆದವ್ರಿಗೆ ಕೊರೋನಾ ವಕ್ಕರಿಸುತ್ತಿದೆ. ಉಳಿದ ಶೇಕಡಾ 3 ರಷ್ಟು ಮಂದಿ ಲಸಿಕೆ ಪಡೆದಯವರಾಗಿದ್ದಾರೆ. ಹಾಗೆನೇ ಐಸಿಯು ಸೇರುತ್ತಿರೋ ಪೈಕಿ ಲಸಿಕೆ ಪಡೆಯದವ್ರ ಸಂಖ್ಯೆ ಹೆಚ್ಚಾಗ್ತಿದೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದನ್ನ ಮನಗಂಡ ಬಿಬಿಎಂಪಿ ಈಗಿರೋ ನಿಯಮದ ಜತೆಗೆ ಇನ್ನಷ್ಟು ಟೈಟ್ ರೂಲ್ಸ್ ಮಾಡೋ ಅಗತ್ಯವಿದೆ ಅಂತ ಅಭಿಪ್ರಾಯ ಪಟ್ಟಿದೆ.
ಕಳೆದ 10 ದಿನಗಳಲ್ಲಿ ಬೆಂಗಳೂರು ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲೇ ಪಾಸಿಟಿವಿಟಿ ದರ ಹೆಚ್ಚಾಗ್ತಿದೆ. ಇದು ಹೀಗೆ ಸಾಗಿದರೆ ದಿನವೊಂದಕ್ಕೆ ಲಕ್ಷ ಸೋಂಕಿತರು ಪತ್ತೆಯಾದ್ರೂ ಅಚ್ಚರಿ ಪಡಬೇಕಿಲ್ಲ ಅನ್ನೋ ತಜ್ಞರ ಊಹೆ ಸತ್ಯ ಆಗ್ತಿದೆ. ಇದಕ್ಕೆ ಈಗಿನಿಂದ್ಲೇ ಬ್ರೇಕ್ ಹಾಕ್ಬೇಕು ಅಂದ್ರೆ ಸರ್ಕಾರ ಇನ್ಯಾವ ಕಠಿಣ ನಿಯಮ ಕೈಗೊಳ್ಳುತ್ತೋ. ಜನಕ್ಕೆ ಮತ್ತೆ ಯಾವ ಗಂಡಾಂತರ ಕಾದಿಯೋ ಆ ದೇವರೇ ಬಲ್ಲ.