Thursday, December 19, 2024

ನಟಿ ಕೀರ್ತಿ ಸುರೇಶ್​ಗೆ ಕೋವಿಡ್​​

ದಕ್ಷಿಣ ಭಾರತದ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಕೀರ್ತಿ ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಎಲ್ಲರಿಗೂ ನಮಸ್ಕಾರ. ನನಗೆ ಕೊವಿಡ್-19 ಪಾಸಿಟಿವ್ ದೃಢವಾಗಿದೆ.

ನಾನು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ಸೋಂಕಿನ ಸಣ್ಣ ರೋಗಲಕ್ಷಣಗಳು ನನಗೆ ಕಾಣಿಸಿಕೊಂಡಿತು. ಇತ್ತೀಚೆಗೆ ಈ ವೈರಸ್ ಹರಡುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ದಯವಿಟ್ಟು ಎಲ್ಲರೂ ಕೊವಿಡ್ ನ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES