Wednesday, January 22, 2025

ಮಗು ಮಲಗಿಸಲು ಜೋಲಿ ಕಟ್ಟಿದ್ದಕ್ಕೆ ಪೊಲೀಸರ ಅತಿಥಿಯಾದ ಮಹಿಳೆ

ಶಿವಮೊಗ್ಗ : ನಿಂತಿದ್ದ ರೈಲು ಭೋಗಿಯಲ್ಲಿ ಜೋಲಿಗಾಗಿ ಸೀರೆ ಕಟ್ಟಿದ ಅಪರೂಪದ ಘಟನೆ ಸಾಗರದ ತಾಳಗುಪ್ಪ ರೈಲು ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರಿನ ಯಲಹಂಕದ ನಿವಾಸಿ ನಿವೇದಿತಾ, ರೈಲಿನಲ್ಲಿ ಬಂದಿದ್ದ ಇವರು . ಶಿವಮೊಗ್ಗದಲ್ಲಿ ಇಳಿಯಬೇಕಿದ್ದ ನಿವೇದಿತಾ ನಿದ್ರೆಯಲ್ಲಿ ತಾಳಗುಪ್ಪ ತಲುಪಿದ್ದಾರೆ.ಮೆಗ್ಗಾನ್ ಆಸ್ಪತ್ರೆಗೆ ತನ್ನ ಮಗುವಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಮಹಿಳೆ.ವಾಪಾಸ್ ಅದೇ ರೈಲಿನಲ್ಲಿ ಹಿಂದಿರುಗಲು ನಿರ್ಧರಿಸಿದ್ದಾರೆ. ನಿವೇದಿತಾ ಆಗ ಮಗು ಮಲಗಿಸಲು ಜೋಲಿ ಕಟ್ಟುತ್ತಿದ್ದ ನಿವೇದಿತಾ , ಈ ವೇಳೆ ದೃಶ್ಯ ನೋಡಿ ತಪ್ಪಾಗಿ ತಿಳಿದ ರೈಲು ಸ್ವಚ್ಛತಾ ಕಾರ್ಮಿಕೆ.ಸರಸರನೇ ಬಂದು ನಿವೇದಿತಾಗೆ ಕಪಾಳಮೋಕ್ಷ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ.ಆದರೆ ಇಲ್ಲಿ ನಡೆದಿದ್ದೇ ಬೇರೆ, ರೈಲು ಬೋಗಿಯಿಂದ ಮಕ್ಕಳು ಹೊರಗೆ ಹೋಗುತ್ತಾರೆ ಎಂದು ಜೋಲಿ ಕಟ್ಟಿದ್ದೆ ಎಂದು ಹೇಳಿದ್ದಾರೆ . ಈ ವೇಳೆ ಪರಸ್ಪರ ಮುಖ ನೋಡಿಕೊಂಡ ಪೊಲೀಸರು-ಸ್ಥಳಿಯರು ಆತ್ಮಹತ್ಯೆಗೆ ಮಹಿಳೆ ಯತ್ನಿಸಿದ್ದಾಳೆ ಎಂದು ತಪ್ಪಾಗಿ ಬಿಂಬಿಸಿದ್ದ ಸ್ಥಳಿಯರು, ನಂತರ ಪ್ರಯಾಣಕ್ಕಾಗಿ ಹಣ ನೀಡಿ ಸ್ಧಳಿಯರು ಕಳುಹಿಸಿದ್ದಾರೆ.

RELATED ARTICLES

Related Articles

TRENDING ARTICLES