Wednesday, December 25, 2024

5 ದಿನದಲ್ಲಿ 8 ಸಾವಿರ ಯುವಕರಿಗೆ ಡೆಡ್ಲಿ ವೈರಸ್ ಅಟ್ಯಾಕ್​​..!

ರಾಜ್ಯ : ಸದ್ಯಕ್ಕಂತೂ ಕ್ರೂರಿ ಕೊರೋನಾ ತನ್ನ ಅಟ್ಟಹಾಸ ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಕೇಸ್​​ಗಳು ದಿನೇ ದಿನೆ ರಾಕೆಟ್ ವೇಗದಲ್ಲಿ ಜಾಸ್ತಿಯಾಗುತ್ತಿವೆ. ಮಹಾಮಾರಿ ಯುವಜನರನ್ನೇ ಹೆಚ್ಚು ಟಾರ್ಗೆಟ್​​ ಮಾಡಿ, ಅಟ್ಯಾಕ್​ ಮಾಡುತ್ತಿರುವುದು ಸಿಲಿಕಾನ್​ ಸಿಟಿಯನ್ನ ಬೆಚ್ಚಿಬೀಳಿಸಿದೆ.

ಮಹಾಮಾರಿ ಕೊರೋನಾ ಎಲ್ಲೆಡೆ ಭಯಾನಕವಾಗಿ ಹಬ್ಬುತ್ತಿದ್ದು ರಾಜಧಾನಿ ಬೆಂಗಳೂರಲ್ಲಿ ಕೊರೋನಾ ಕಂಟ್ರೋಲ್​ ತಪ್ಪಿದಂತೆ ಕಾಣಿಸುತ್ತಿದೆ. ಇನ್ನು ಈ ವೈರಸ್​​ ಸಮುದಾಯಕ್ಕೂ ಎಂಟ್ರಿಕೊಟ್ಟಿದೆ. ಅದರಲ್ಲೂ ಯುವಕರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ಅಟ್ಯಾಕ್​ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸದ್ಯಕ್ಕೆ ಬೆಂಗಳೂರಿನಲ್ಲಿ 32 ಸಾವಿರ ಸಕ್ರಿಯ ಕೇಸ್​​ಗಳಿದ್ದು ಇದರಲ್ಲಿ ಬಹುತೇಕ 20 ಸಾವಿರ ಮಂದಿ ಯುವಕರೇ ಇದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಪ್ರತಿದಿನ ಸಾವಿರಕ್ಕೂ ಹೆಚ್ಚು ಯುವಕರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಯುವಕರು ಅತಿ ಜಾಗೃತವಾಗಿ ಇರಬೇಕಾಗಿದೆ. ವೈರಸ್​​​ನ ನಿರ್ಲಕ್ಷ್ಯಿಸಿದರೆ ಸಾವು ಕೂಡ ಸಂಭವಿಸಬಹುದು ಅಂತಾರೇ ತಜ್ಞ ವೈದ್ಯರು.

ಯಾವ ದಿನ ಎಷ್ಟೆಷ್ಟು ಕೇಸ್​​..?

ದಿನಾಂಕ ಸೋಂಕಿಗೆ ತುತ್ತಾದ ಯುವಕರು
ಜನವರಿ 4 1048
ಜನವರಿ 5 1918
ಜನವರಿ 6 3200

ಹೀಗೆ.. ದಿನೇ ದಿನೆ ಯುವಕರಲ್ಲಿ ಸೋಂಕು ಜಾಸ್ತಿಯಾಗಿದ್ದು, ಜಸ್ಟ್ 5 ದಿನದಲ್ಲಿ 8 ಸಾವಿರ ಯುವಕರಲ್ಲಿ ಸೋಂಕು ದೃಢಪಟ್ಟಿದೆ. ವಿಪರ್ಯಾಸ ಅಂದ್ರೆ ಎರಡನೇ ಅಲೆಯಂತೆ ಈ ಬಾರಿಯು ಕೂಡ ಯುವಕರೇ ಸೋಂಕಿಗೆ ಹೆಚ್ಚು ತುತ್ತಾಗುತ್ತಿರುವುದು ಆತಂಕ ಹುಟ್ಟಿಸಿದೆ. ಇನ್ನು ತಜ್ಞರು ಹೇಳುವ ಪ್ರಕಾರ 3ನೇ ಅಲೆಯು ಫೆಬ್ರವರಿ 1ರಿಂದ 15ರ ನಡುವೆ ಕಾಣಿಸಿಕೊಳ್ಳಬಹುದು. ಈ ವೇಳೆ ಪ್ರತಿದಿನ ಬರೊಬ್ಬರಿ 50 ಸಾವಿರ ಕೇಸ್ ಕಾಣಿಸಬಹುದು ಅಂತ ವೈದ್ಯರು ಹೇಳುತ್ತಾರೆ.

ಒಟ್ಟಾರೆ ಸದ್ಯಕ್ಕಂತೂ ವೈರಸ್ ಹೇಗೆ ರೂಪಾಂತರಿ ತಾಳುತ್ತೇ ಅಂತ ಹೇಳೋಕೆ ಆಸಾಧ್ಯವಾಗಿದೆ. ಹೀಗಾಗಿ ಮುಂದಿನ 2 ತಿಂಗಳ ಕಾಲ ಜನರು ಅತಿ ಎಚ್ಚರಿಕೆಯಿಂದ ಇದ್ದು, ಪ್ರಾಣ ರಕ್ಷಿಸಿಕೊಳ್ಳುವುದು ಅನಿರ್ವಾಯವಾಗಿದೆ.

RELATED ARTICLES

Related Articles

TRENDING ARTICLES