ರಾಮನಗರ : ಮೇಕೆದಾಟು ಪಾದಯಾತ್ರೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗಲ್ಲ,ತಮಿಳುನಾಡು ಹಸಿರು ಪೀಠದ ಮುಂದೆ ಕೇಸ್ ಹಾಕಿಕೊಂಡಿದೆ. ಅದು ಬಿಟ್ಟರೆ ಸುಪ್ರೀಂ ಮುಂದೆ ಯಾವುದೇ ವ್ಯಾಜ್ಯ ಇಲ್ಲ ಕಾನೂನಾತ್ಮಕವಾಗಿ ಯಾವುದೇ ಅಡತಡೆ ಇಲ್ಲ ಎಂದು ಹೇಳಿದರು.
ಯೋಜನೆ ಆರಂಭ ಆಗಲು ಇಷ್ಟೊಂದು ತಡವಾಗಿದೆ. ಅಂತರಾಷ್ಟ್ರೀಯ ಖ್ಯಾತಿ ನಗರವಾಗಿದೆ, ಹೀಗಾಗಿ ಕುಡಿಯುವ ಅಭಾವ ಮುಂದೆ ಬರುತ್ತದೆ, ಆದರೆ ೩೦ ಜನರ ಮೇಲೆ ಕೇಸ್ ಹಾಕಿದ್ದಾರೆ,ಇನ್ನಷ್ಟು ಜನರ ಮೇಲೆ ಕೇಸ್ ಹಾಕಿದರೆ ನಿಮ್ಮಷ್ಟು ಮುರ್ಖರು ಇಲ್ಲ,ರೇಣುಕಾಚಾರ್ಯ ಕರೋನ ನಿಯಮ ಉಲ್ಲಂಘನೆ ಮಾಡಿದ್ದಾರೆ.ಬಿಜೆಪಿ ನಾಯಕರು ಉಲ್ಲಂಗಣೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಾದಯಾತ್ರೆ ನಡೆಯಬಾರದು, ಕಾಂಗ್ರೆಸ್ ಗೆ ಬಲ ಬರುತ್ತೆ ಅಂತ ತಡೆಯುವ ಪ್ರಯತ್ನ ನಡೆಯುತ್ತಿದೆ,ಆದರೆ ತಮಿಳುನಾಡಿನಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ಕೆಲಸ ನಡೆಯುತ್ತಿದೆ,ಬಿಜೆಪಿ ನಾಯಕರ ಮಾತುಗಳು ಅದೆ ರೀತಿಯಲ್ಲಿ ಇದೆ. ನಾವು ಕರ್ನಾಟಕ ಜನರಿಗೆ ಅನ್ಯಾಯ ಆಗಲು ಬಿಡಲ್ಲ.ನಮ್ಮ ಜನರಿಗೆ ನ್ಯಾಯ ಕೊಡಿಸುತ್ತೇವೆ, ನಮಗೆ ಜಂಬ, ಪ್ರತಿಷ್ಠೆ ಏನು ಇಲ್ಲ,ಎರಡು ವರ್ಷಗಳ ಕಾಲ ಯೋಜನೆಗೆ ಕಾದಿದ್ದೇವೆ,ಈಗ ಪಾದಯಾತ್ರೆ ಮಾಡುತ್ತಿದ್ದೇವೆ .
ನಮ್ಮ ಕಾರ್ಯಕರ್ತರಿಗೆ ಕರೋನ ರೂಲ್ಸ್ ಫಾಲೂ ಮಾಡಲು ಹೇಳಿದ್ದೇವೆ.ರೋಗ ತಡೆಯುವ ಎಲ್ಲಾ ಪ್ರಯತ್ನ ಮಾಡಿದ್ದೇವೆ.ಲಾಕ್ ಡೌನ್ ಮಾಡಿ ಜನರು ಬಿದಿಗೆ ಬಂದರು,ಮತ್ತೆ ಪರಿಸ್ಥಿತಿ ನಿರ್ಮಾಣ ಆದ್ರೆ ಬಿಜೆಪಿಯಿಂದ ಆಗಬೇಕು, ಬಿಜೆಪಿಗರು ಕರೋನ ನಿಯಮ ಪಾಲಿಸುತ್ತಿಲ್ಲ,ಬಡವರಿಗೆ ತೊಂದರೆ ಆದರೆ ಬಿಜೆಪಿ ಹೊಣೆ ಹೊರಬೇಕು ಎಂದು ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ.