Monday, December 23, 2024

ಮತ್ತೆ ಗಂಡಸ್ತನದ ಮಾತು!

ಬೆಂಗಳೂರು: ಮೇಕೆದಾಟು ಯೋಜನೆ ಕಾಂಗ್ರೆಸ್‌ನಿಂದ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಈ ಯೋಜನೆ ಜಾರಿ ಸಾಧ್ಯ. ನಿಮಗೆ ಗಂಡಸ್ತನ ಇದ್ದರೆ ಯೋಜನೆಯನ್ನು ಜಾರಿ ಮಾಡಿ ತೋರಿಸಿ ಎಂದು ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್​ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

ಮೇಕೆದಾಟು ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಪ್ರಕರಣ ಸುಪ್ರೀಂ ಕೋರ್ಟ್​​​​ನಲ್ಲಿದೆ. ನಾವು ಜಾರಿ ಮಾಡಲು ಮುಂದಾಗಿದ್ದಕ್ಕೆ ಡಿಕೆ ಶಿವಕುಮಾರ್ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 2008ರಿಂದ ಕಾವೇರಿ ಜಲಾನಯನ ವ್ಯಾಪ್ತಿಯ 12-13 ಜಿಲ್ಲೆಗಳಲ್ಲಿ ನೀರಾವರಿ ಯೋಜನೆ ಜಾರಿಗೆ ತಂದವರು ಬಿಜೆಪಿಯವರು. ಯಡಿಯೂರಪ್ಪ ಸಿಎಂ ಬೊಮ್ಮಾಯಿ ನೀರಾವರಿ ಮಂತ್ರಿಯಾಗಿದ್ದರು. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆ ಕುಂಠಿತವಾದಾಗ ಅದನ್ನು ಅಭಿವೃದ್ಧಿಪಡಿಸಿದವರು ಬಿಜೆಪಿಯವರು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES