Sunday, December 22, 2024

ರೂಮ್ ಬಾಯ್ ಸಿನಿಮಾಗೆ ಡಾಲಿ ಧನಂಜಯ ಸಾಥ್..!

ಡಾಲಿ ಧನಂಜಯ ಸದ್ಯ ಬಡವ ರಾಸ್ಕಲ್ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಎಲ್ಲೆಡೆ ಸಿನಿಮಾ ಸೂಪರ್ ಸಕ್ಸಸ್ ಕಂಡಿದ್ದು ಗೆಲುವಿನ ನಗೆ ಬೀರಿದೆ. ಈ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಧನಂಜಯ ಇದೀಗ ಹೊಸಬರ ಚಿತ್ರತಂಡವೊಂದಕ್ಕೆ ಸಾಥ್ ನೀಡಿದ್ದಾರೆ.

ರೂಮ್ ಬಾಯ್.. ಸದ್ಯ ಸ್ಯಾಂಡಲ್​ವುಡ್​​ನಲ್ಲಿ ಮೂಡಿಬರ್ತಿರೋ ಕ್ರೈಂ ಥ್ರಿಲ್ಲರ್ ಚಿತ್ರಕತೆಯ ಸಿನಿಮಾ. ನಾಗಡದಿನ್ನಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಪರೇಷನ್ ನಕ್ಷತ್ರ,ಲೈಫ್ ಸೂಪರ್ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿರುವ ಲಖಿತ್ ಸೂರ್ಯ ಹೀರೋ ಕಮ್ ನಿರ್ಮಾಪಕ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಲಿಖಿತ್​ಗೆ ಜೋಡಿಯಾಗಿ ರಕ್ಷಾ ಬಣ್ಣ ಹಚ್ಚಿದ್ದಾರೆ.

ಸದ್ಯ ರೂಮ್ ಬಾಯ್ ಚಿತ್ರದ ಟೀಸರ್ ರಿವೀಲ್ ಆಗಿದೆ. ನಟ ರಾಕ್ಷಸ ಡಾಲಿ ಧನಂಜಯ ಈ ಟೀಸರ್ ಲಾಂಚ್ ಮಾಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ನಟ ಧನಂಜಯ ಚಿತ್ರರಂಗದಲ್ಲಿ ತಾವು ಬೆಳೆಯೋದ್ರ ಜೊತೆಗೆ ಹೊಸ ಕಲಾವಿದರಿಗೂ ಸಾಥ್ ನೀಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಡಿಸ್ಟ್ರಿಬ್ಯೂಷನ್​ಗೆ ಕಾಲಿಟ್ಟ ಸತ್ಯ ಪಿಕ್ಚರ್ಸ್​ ಸಂಸ್ಥೆಗೆ, ಬಡವರ ಬಂಧು ಆಗಿ ಡಾಲಿ ಸತ್ಯ ಪಿಕ್ಚರ್ಸ್ ಬ್ಯಾನರ್ ಲಾಂಚ್ ಮಾಡುವ ಮೂಲಕ ಸ್ನೇಹಿತನಿಗೆ ಸಾಥ್ ನೀಡಿದ್ರು. ಇದೀಗ ರೂಮ್ ಬಾಯ್ ಚಿತ್ರದ ಟೀಸರ್ ರಿವೀಲ್ ಮಾಡಿರೋ ಧನಂಜಯ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸೈಕಾಲಾಜಿಲಾಜಿಕಲ್ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕತೆ ಇರೋ ಈ ಸಿನಿಮಾದಲ್ಲಿ ಹೆಚ್ಚಾಗಿ ಌಕ್ಷನ್ ಸೀಕ್ವೆನ್ಸ್ ಇವೆ. ಟೀಸರ್​ನಲ್ಲಿರೋ ಪ್ರತೀ ದೃಶ್ಯಗಳು ನೋಡುಗರ ಹುಬ್ಬೇರಿಸ್ತಿದೆ. ಸದ್ಯ ಹೊರ ಬಂದಿರೋ ರೂಮ್ ಬಾಯ್ ಚಿತ್ರದ ಟೀಸರ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸ್ತಿದೆ.

ರೂಮ್ ಬಾಯ್ ಚಿತ್ರಕ್ಕೆ ಲಿಖಿತ್ ಸೂರ್ಯ ಬಂಡವಾಳ ಹೂಡಿದ್ದು, ಐಕಾನ್ ಪ್ರೊಡಕ್ಷನ್ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಹಾಡುಗಳಿಗೆ ರೋಣದ ಬಕ್ಕೇಶ್ ಮ್ಯೂಸಿಕ್ ನೀಡಿದ್ರೆ, ಧನಪಾಲ್ ನಾಯಕ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಒಟ್ಟಾರೆ ಹೊಸಬರ ರೂಮ್ ಬಾಯ್ ಚಿತ್ರದ ಟೀಸರ್​​ನ್ನು ನಟ ಧನಂಜಯ ರಿವೀಲ್ ಮಾಡಿದ್ದು, ಟೀಸರ್​ಗೆ ಪ್ರೇಕ್ಷಕರಿಂದ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈಗಾಗ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿರೋ ಚಿತ್ರತಂಡ ಏಪ್ರಿಲ್ ಅಥವಾ ಮೇ ನಲ್ಲಿ ಚಿತ್ರ ರಿಲೀಸ್ ಮಾಡೋ ಸೂಚನೆ ಕೊಟ್ಟಿದೆ.

RELATED ARTICLES

Related Articles

TRENDING ARTICLES