Monday, December 23, 2024

ಹದಿಹರೆಯದ ಮಕ್ಕಳಿಂದ ಬಾಲಕಿ ಮೇಲೆ ಅತ್ಯಾಚಾರ

ಕಲಬುರ್ಗಿ: ಹುಷಾರ್! ಇಂದು ಅಪ್ರಾಪ್ತ ವಯಸ್ಕ ಬಾಲಕ ಬಾಲಕಿಯರು ಬಹುಬೇಗ ಹಾದಿತಪ್ಪುತ್ತಿದ್ದಾರೆ. ತಂದೆ ತಾಯಿಯ ಬಳಿ ತಮ್ಮ ಮಕ್ಕಳಿಗಾಗಿ ಇಂದು ಸಮಯವಿಲ್ಲ. ಮಕ್ಕಳು ಶಾಲೆಯಲ್ಲಾದರೂ ಒಳ್ಳೆ ಬುದ್ದಿ ಕಲಿತಾರು ಎಂದರೆ ಕೊರೋನ ಅದಕ್ಕೂ ಅಡ್ಡಗಾಲಿಕ್ಕಿ ಹದಿಹರೆಯದ ಮಕ್ಕಳನ್ನು ಅತಂತ್ರರನ್ನಾಗಿಸಿದೆ. ಆನ್​ಲೈನ್ ಕ್ಲಾಸ್​ನಿಂದ ಮಕ್ಕಳು ಓದು ಕಲಿಯುವುದರ ಜೊತೆಗೆ ಇಂಟರ್​ನೆಟ್​ನಲ್ಲಿ ಧುತ್ತನೆ ಪ್ರತ್ಯಕ್ಷವಾಗುವ ಪೋಲಿ ವಿಡಿಯೋಗಳನ್ನೂ ನೋಡುವ ಸಾಧ್ಯತೆ ಇಂದು ಅಪಾರವಾಗಿದೆ. ಇದೆಲ್ಲದರ ಫಲಿತಾಂಶವೇ ಇಂದು ಕಲಬುರ್ಗಿಯಲ್ಲಿ ಐವರು ಅಪ್ರಾಪ್ತ ವಯಸ್ಕ ಬಾಲಕರು ಅತ್ಯಾಚಾರದಂಥ ಹೀನ ಕೃತ್ಯ ಎಸಗಿದ್ದಾರೆ.

ಈ ಐವರು ಅಪ್ರಾಪ್ತ ಬಾಲಕರ ವಿರುದ್ಧ ಅತ್ಯಾಚಾರವೆಸಗಿದ ಆರೋಪದ ಮೇಲೆ ಕಲಬುರಗಿಯ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜನವರಿ 6 ರಂದು ಬುದ್ಧಿಮಾಂದ್ಯ ಬಾಲಕಿಯನ್ನು ಕರೆದೊಯ್ದು ಈ ಕೃತ್ಯ ಎಸಗಿರುವ ಬಗ್ಗೆ ಆರೋಪ ದಾಖಲಾಗಿದ್ದು, ಬಾಲಕಿ ಪೋಷಕರಿಂದ ವಿವಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಐವರು ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES