Sunday, December 29, 2024

100 ಜೋಡಿ ಸೆಣಬಿನ ಪಾದರಕ್ಷೆಗಳನ್ನು ಕಾರ್ಮಿಕರಿಗೆ ಕಳುಹಿಸಿಕೊಟ್ಟ : ಪ್ರಧಾನಿ ಮೋದಿ

ಕಾಶಿ ವಿಶ್ವನಾಥ ದೇಗುಲದ ಆವರಣದಲ್ಲಿ ಯಾರೊಬ್ಬರೂ ರಬ್ಬರ್ ಅಥವಾ ಚರ್ಮದ ಚಪ್ಪಲಿ ಧರಿಸುವಂತಿಲ್ಲ. ಅರ್ಚಕರಾಗಲಿ, ದೇವರ ದರ್ಶನಕ್ಕೆ ಹೋಗುವ ಭಕ್ತರಾಗಲಿ, ಭದ್ರತಾ ಸಿಬ್ಬಂದಿಯೇ ಆಗಲಿ ಅಥವಾ ಸ್ವಚ್ಛತೆಗಾಗಿ ಹೋಗುವವರೇ ಆಗಲಿ, ಯಾರಿಗೂ ಇದನ್ನು ಧರಿಸಲು ಅವಕಾಶವಿಲ್ಲ.

ಇದೇ ಕಾರಣಕ್ಕೆ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಕಾರ್ಮಿಕರು ಬರಿಗಾಲಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಇದು ಒಗ್ಗಿಹೋಗಿರಬಹುದು, ಬಿಸಿಲು, ಮಳೆ, ಚಳಿಯೆನ್ನದೇ ಅವರು ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಈಗ ಕಾಶಿಯಲ್ಲಿ ಭಯಂಕರ ಚಳಿ ಇರುವ ಕಾರಣ, ಚಪ್ಪಲಿ ಇಲ್ಲದೆಯೇ ಕೆಲಸ ಮಾಡುವುದು ಬಹು ಕಷ್ಟ ಎನ್ನುವುದನ್ನು ಅರಿತ ಪ್ರಧಾನಿ ಮೋದಿ, ಕಾರ್ಮಿಕರ ಕಷ್ಟವನ್ನು ಅರ್ಥ ಮಾಡಿಕೊಂಡು 100 ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಾರ್ಮಿಕರಿಗಾಗಿ ಕಳಿಸಿಕೊಟ್ಟಿದ್ದಾರೆ.

ಇದನ್ನು ಸ್ವೀಕರಿಸಿದ ಕಾರ್ಮಿಕರ ಕಣ್ಣುಗಳು ತುಂಬಿಬಂದಿದ್ದು, ಪ್ರಧಾನಿಯವರು ಸದಾ ತಾವೊಬ್ಬರು ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಾರೆ. ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಭಾವುಕರಾಗಿ ನುಡಿದಿದ್ದಾರೆ.

RELATED ARTICLES

Related Articles

TRENDING ARTICLES