Wednesday, January 22, 2025

ಕರುಳ ಕುಡಿಯನ್ನು ಕೊಚ್ಚಿ ಕೊಲೆಗೈದ ತಾಯಿ

ಮೈಸೂರು : ತಾಯಿ ಅಂದರೆ ದೇವರ ಸಮಾನ ಇದು ಎಲ್ಲರಿಗೂ ತಿಳಿದ ವಿಚಾರ ಹಾಗೆನೇ ತಾಯಿ ತನ್ನ ಮಗುವನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಆದರೆ ಇಲ್ಲೊಂದು ತಾಯಿಯೇ ತನ್ನ ಹೆತ್ತ ಕರುಳ ಕುಡಿಯನ್ನು ಕೊಲೆಗೈದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

ಬೂದನೂರಿನ ಶಂಕರ್ ಹಾಗೂ ಯಡತೊರೆಯ ಭವಾನಿಗೆ ಐದಾರು ವರ್ಷಗಳ ಹಿಂದೆ ಮದುವೆ ಆಗಿತ್ತು. ಹಾಗೆನೇ ಭವಾನಿ ಮೈಮೇಲೆ ದೇವರು ಬರುತ್ತೆ ಅನ್ನುತ್ತಿದ್ದಳು. ಇತ್ತೀಚೆಗೆ ಮಾನಸಿಕ ಅಸ್ವತ್ಥತೆಯಿಂದ ಬಳಲುತ್ತಿದ್ದ ಭವಾನಿ. ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಮಗು ಸಹಿತ ತವರು ಮನೆ ಸೇರಿದ್ದಳು. ಪತಿ ಶಂಕರ್ ಸಮಾಧಾನಪಡಿಸಿ ವಾಪಸ್ ಕರೆತಂದಿದ್ದರು.ಕೆಲಸದ ನಿಮಿತ್ತ ಗಂಡ ಹೊರಗಡೆ ಹೋಗಿದ್ದಾಗ ಕಾರಣ ನಾಲ್ಕು ವರ್ಷದ ಬಾಲಕ ಶ್ರೀನಿವಾಸ್ ಮೇಲೆ ಮಚ್ಚಿನಿಂದ ತಲೆಗೆ ನಾಲ್ಕೈದು ಬಾರಿ ಭವಾನಿ ಹೊಡೆದಿದ್ದಾರೆ ಗ್ರಾಮಸ್ಥರ ನೆರವಿನಿಂದ ಎಚ್.ಡಿ.ಕೋಟೆಯ ತಾಲೂಕು ಆಸ್ಪತ್ರೆಗೆ ಸೇರಿಸಿದರು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಮಗು ಶ್ರೀನಿವಾಸ್ ಸಾವನ್ನಪ್ಪಿದೆ.ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES