Sunday, December 22, 2024

ಕಾಂಗ್ರೆಸ್‌ ಪಾದಯಾತ್ರೆ ಮೇಲೆ FIR ಪ್ರಯೋಗಿಸಿದ ಸರ್ಕಾರ..!

ರಾಜ್ಯ : ಕಾಂಗ್ರೆಸ್‌ ಪಾದಯಾತ್ರೆ ಬಿಸಿ ಬಿಜೆಪಿ ಸರ್ಕಾರಕ್ಕೆ ಭರ್ಜರಿಯಾಗಿಯೇ ತಟ್ಟಿದೆ.. ಹೀಗಾಗಿ, ಏನಾದ್ರೂ ಮಾಡಿ ಯಾತ್ರೆಗೆ ಬ್ರೇಕ್‌ ಹಾಕಲು ಸರ್ಕಾರ ನಾನಾ ಕಸರತ್ತು ಮಾಡ್ತಿದೆ. ಇದೀಗ, ಎಫ್‌ಐಆರ್‌ ಅಸ್ತ್ರ ಬಳಸಿದ್ದು, ಇದ್ರ ಜೊತೆಗೆ ಕೊರೋನಾ ಪಾಲಿಟಿಕ್ಸ್‌ ಶುರುವಾಗಿದೆ.

ಸದ್ಯ, ಬಿಜೆಪಿಗೆ ತಲೆನೋವಾಗಿರುವ ಈ ಪಾದಯಾತ್ರೆಯನ್ನು ಮಟ್ಟ ಹಾಕಲು ಎಲ್ಲಾ ಆಯಾಮಗಳಲ್ಲೂ ಕಸರತ್ತು ಮಾಡ್ತಿದೆ.. ರಾಮನಗರ ಡಿಸಿಯಿಂದ ನೋಟಿಸ್‌ ಕೂಡ ಕೊಡಿಸಲಾಗಿದೆ.. ಆದ್ರೂ, ಡೋಂಟ್‌ಕೇರ್‌ ಅಂತ ಪಾದಯಾತ್ರೆ ನಡೆಯುತ್ತಿದ್ದು, ಇದೀಗ, ಕಾಂಗ್ರೆಸ್‌ನ ನಾಯಕರಿಗೆ FIR ಶಾಕ್‌ ಕೊಟ್ಟಿದೆ ರಾಜ್ಯ ಸರ್ಕಾರ.

ಕರ್ಫ್ಯೂ ಉಲ್ಲಂಘಿಸಿ ‘ಕೈ’ ಪಾದಯಾತ್ರೆ ಹಿನ್ನೆಲೆಯಲ್ಲಿ 30 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆ್ಯಕ್ಟ್ 2005ರ ಅಡಿಯಲ್ಲಿ IPC ಸೆಕ್ಷನ್ 141, 143, 290, 336ರ ಅಡಿ ಪ್ರಕರಣ ದಾಖಲಾಗಿದೆ.

ಕೈ ಪಾದಯಾತ್ರೆ ಮೇಲೆ FIR ಅಸ್ತ್ರ :

A-1 ಡಿ.ಕೆ.ಶಿವಕುಮಾರ್, A-2 ಸಿದ್ದರಾಮಯ್ಯ
A-3 ಡಿ.ಕೆ.ಸುರೇಶ್, A-4 ವೀರಪ್ಪ ಮೊಯ್ಲಿ
A-5 ಮಲ್ಲಿಕಾರ್ಜುನ ಖರ್ಗೆ, A-6 ಪರಮೇಶ್ವರ್
A-7 ಈಶ್ವರ್ ಖಂಡ್ರೆ,A-8 ಉಮಾಶ್ರೀ, A-9 ಹರಿಪ್ರಸಾದ್
A-10 ಎಂ.ಬಿ.ಪಾಟೀಲ್, A-11 ರಾಮಲಿಂಗಾರೆಡ್ಡಿ
A-12 ಎಂಎಲ್ಸಿ ರವಿ, A-13 ಟಿ.ಬಿ.ಜಯಚಂದ್ರ
A-14 ಹೆಚ್.ಎಂ.ರೇವಣ್ಣ, A-15 ಸಲೀಂ ಅಹ್ಮದ್
A-16 N.A.ಹ್ಯಾರೀಸ್, A-17 ಲಕ್ಷ್ಮಿ ಹೆಬ್ಬಾಳ್ಕರ್
A-18 ವಿನಯ್ ಕುಲಕರ್ಣಿ, A-19 ಪ್ರಿಯಾಂಕ್ ಖರ್ಗೆ
A-20 ಯತೀಂದ್ರ ಸಿದ್ದರಾಮಯ್ಯ, A-21 ಯು.ಟಿ.ಖಾದರ್
A-22 ಸೌಮ್ಯಾ ರೆಡ್ಡಿ, A-23 ನಲಪಾಡ್ ಹ್ಯಾರಿಸ್
A-24 ಚಲುವರಾಯಸ್ವಾಮಿ, A-25 ಮೋಟಮ್ಮ
A-26 ಹೆಚ್.ಕೆ.ಪಾಟೀಲ್, A-27 ಸಾಧುಕೋಕಿಲ
A-28 ಸಾರಾ ಗೋವಿಂದು, A-29 ಜಯಮಾಲಾ
A-30 ದುನಿಯಾ ವಿಜಯ್ ವಿರುದ್ಧ ಕೇಸ್ ದಾಖಲು

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಹಶೀಲ್ದಾರ್‌ ವಿಶ್ವನಾಥ್‌ ದೂರಿನ ಮೇಲೆ ಎಫ್‌ಐಆರ್‌ ಹಾಕಲಾಗಿದೆ. ಇದ್ರ ಮಧ್ಯೆ, ಕೊರೋನಾ ಹೈಡ್ರಾಮಾ ಶುರುವಾಗಿದೆ.

ಕಾಂಗ್ರೆಸ್‌ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸ್ತಿರುವ ಪಾದಯಾತ್ರೆ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪಕ್ಕಾ ರಾಜಕೀಯ ಆಟ ಶುರುವಾಗಿದ್ದು, ಸದ್ಯ ರಾಜ್ಯದಲ್ಲಿ ತನ್ನ ಆಟ ಮುಂದುವರೆಸಿರುವ ಕೊರೋನಾವನ್ನು ಪಾದಯಾತ್ರೆ ಮೇಲೆ ಬಿಡಲು ಪ್ಲ್ಯಾನ್‌ ನಡೆದಿದೆ ಅಂತ ಆರೋಪ ಕೇಳಿ ಬರ್ತಿದೆ.
ರಾಮನಗರ ಎಡಿಸಿ ಜವರೇಗೌಡಗೆ ಕೊರೋನಾ ಪಾಸಿಟಿವ್ ಬಂದಿದೆ. ನಿನ್ನೆಯಷ್ಟೇ ಡಿ.ಕೆ.ಶಿವಕುಮಾರ್‌ ಬಳಿ ಹೋಗಿ ಕೊರೋನಾ ನಿಯಮ ಪಾಲಿಸಿ ಅಂತ ಮನವಿ ಮಾಡಿದ್ರು. ಆ ವೇಳೆ, ಡಿಕೆಶಿ ಫುಲ್‌ ಗರಂ ಆಗಿದ್ರು. ಪಾದಯಾತ್ರೆ ಬಳಿ ಹೋಗಿದ್ದ ಕಾರಣ ಕೊರೋನಾ ಟೆಸ್ಟ್‌ ಮಾಡಿಸಿದ್ದ ಎಡಿಸಿಗೆ ಪಾಸಿಟಿವ್‌ ಬಂದಿದ್ದು, ಕ್ವಾರಂಟೀನ್‌ನಲ್ಲಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯಗೆ ಫೋನ್‌ ಮಾಡಿ ಡಿಕೆಶಿ ಹೇಳಿದ್ರು. ಆದ್ರೆ, ಸಿಎಂ ಮಾತ್ರ ಕೊರೋನಾ ಮುಂದಿಟ್ಕೊಂಡು ಕಾಂಗ್ರೆಸ್‌ ಹಣಿಯಲು ಪ್ಲ್ಯಾನ್‌ ಮಾಡಿದ್ದಾರೆ..

ನನಗೆ ಕೊರೋನಾ ಬರುವಂತೆ ಮಾಡುವ ಹುನ್ನಾರ ನಡೆದಿತ್ತು. ನನಗೆ ಯಾಕೆ ಈ ರೀತಿಯಲ್ಲಿ ಮಾಡ್ತಾ ಇದ್ದಾರೆ ಗೊತ್ತಿಲ್ಲ ಅಂತ ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಏನಾದ್ರೂ ಮಾಡಿ ಪಾದಯಾತ್ರೆ ನಿಲ್ಲಿಸಲು ಪ್ಲ್ಯಾನ್ ಮಾಡಿದ್ದಾರೆ. ಅಡಿಷನಲ್ ಡಿಸಿ ನಿನ್ನೆ ಚೆಕಪ್ ಮಾಡಲು ಬಂದಿದ್ರು. ನನಗೆ ಕೊರೋನಾ ಹಬ್ಬಿಸೋಕೆ ಬಂದಿದ್ರು ಅನ್ನಿಸುತ್ತದೆ. ಸಿಎಂಗೆ ಇಂತಹ ಬುದ್ಧಿ ಯಾಕೆ ಬಂತೋ ಗೊತ್ತಿಲ್ಲ. ಬಹುಶಃ ಆರೋಗ್ಯ ಸಚಿವರಿಂದ ಇಂತಹ ಬುದ್ಧಿ ಬಂದಿರಬೇಕು ಅಂತ ಡಿಕೆಶಿ ಆರೋಪಿಸಿದ್ರು.

ಈಗಾಗಲೇ ಎರಡು ದಿನದ ಪಾದಯಾತ್ರೆ ಕಂಪ್ಲೀಟ್‌ ಮಾಡಿರುವ ಕಾಂಗ್ರೆಸ್‌ ಪಡೆಗೆ ಸರ್ಕಾರ ಶಾಕ್‌ ಮೇಲೆ ಶಾಕ್‌ ಕೊಡ್ತಿದೆ.. ಆದೇನೇ ಆಗ್ಲಿ ನಾವು ಪಾದಯಾತ್ರೆ ಮಾಡೇ ಮಾಡ್ತೀವಿ ಅಂತ ಪಣ ತೊಟ್ಟಿರೋದು ರಾಜಕೀಯದ ಜೊತೆ ಕೊರೋನಾ ನಂಟನ್ನು ಬೆಸೆಯುವ ಪ್ರಯತ್ನ ನಡೆದಿದ್ಯಾ ಅನ್ನೋ ಡೌಟ್‌ ಬರುತ್ತಿದೆ.

RELATED ARTICLES

Related Articles

TRENDING ARTICLES