Wednesday, January 22, 2025

3 ನೇ ದಿನಕ್ಕೇ ಕಾಲಿಟ್ಟ ಮೇಕೆದಾಟು ಪಾದಯಾತ್ರೆ : ಡಿಕೆಶಿಗೆ ಸಾಥ್​ ನೀಡಲು ಸಿದ್ದು ಎಂಟ್ರಿ

ರಾಮನಗರ : ಸರ್ಕಾರವು ಜಾರಿಗೆ ತಂದಿರುವ ಕೋವಿಡ್​ ನಿಯಾಮವಳಿಗಳನ್ನು ಬದಿಗೊತ್ತಿ ರಾಜ್ಯ ಕಾಂಗ್ರೆಸ್​ ಪಕ್ಷವು ಕುಡಿಯುವ ನೀರಿನ ಯೊಜನೆಯಾದ ಮೇಕೆದಾಟು ಯೋಜನೆಯನ್ನು ಶೀಘ್ರವೇ ಜಾರಿಗೆ ತರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪಾದಯಾತ್ರೆಯನ್ನು ಕೈಗೊಂಡಿದ್ದರು, ಇದೀಗ ಎರಡು ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ , ಇಂದು ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಇಂದಿನ ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಹಾಗೂ ಆರೋಗ್ಯದ ಏರುಪೇರುನಿಂದಾಗಿ ಪಾದಯಾತ್ರೆಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಸಿದ್ದರಾಮಯ್ಯ ಅವರು ತಜ್ಞರ ಸಲಹೆ ಮೇರೆಗೆ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದು ಇಂದು ಬೆಂಗಳೂರಿನಿಂದ ಕನಕಪುರದ ಕಡೆಗೆ ಪಾದಯಾತ್ರೆಗೆ ಕೈ ಜೋಡಿಸಲು ಹೊರಟಿದ್ದಾರೆ. ಡಿ ಕೆ ಶಿವಕುಮಾರ್ ಅವರು ಕನಕಪುರದಿಂದ ಇಂದು ಪಾದಯಾತ್ರೆಗೆ ಚಾಲನೆ ಕೊಡಲಿದ್ದಾರೆ.

ಕನಕಪುರದಿಂದ ಹೊರಡಲಿರುವ ಪಾದಯಾತ್ರೆಯು ಚಿಕ್ಕೇನಹಳ್ಳಿವರೆಗೆ ಮುಂದುವರೆಯಲಿದೆ. ಮತ್ತು ಗಾಣಾಳು ಗ್ರಾಮದಲ್ಲಿ ಊಟದ ವ್ಯವಸ್ಥೆ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಇಂದಿನ ಪಾದಯಾತ್ರೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೈ ಕಾರ್ಯಕರ್ತರು ಆಗಮಿಸಲಿದ್ದಾರೆ.

RELATED ARTICLES

Related Articles

TRENDING ARTICLES