Wednesday, January 22, 2025

ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ತಂದು ತಮ್ಮ ಗಂಡಸ್ತನ ತೋರಿಸಲಿ-ಡಿ.ಕೆ.ಸುರೇಶ್

ಕನಕಪುರ: ಬಿಜೆಪಿ ಶಾಸಕರು ಹಾಗೂ ಸಂಸದರು ಪ್ರಧಾನಿ ಎದುರು ಗಂಡಸ್ತನ ತೋರಿಸಲಿ ಎಂದು ಸಚಿವ ಅಶ್ವಥ್ ನಾರಾಯಣಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಅವರು ಗಂಡಸರು ಅಂತಾ ತೋರಿಸಲಿ. ಮೇಕೆದಾಟು ಯೋಜನೆ ಅನುಷ್ಠಾನ ಮಾಡಲಿ. ನಾನೇ ಕನಕಪುರದಲ್ಲಿ ಅವರ ಪಾದಪೂಜೆ ಮಾಡ್ತೇನೆ.

ಡಬಲ್ ಎಂಜಿನ್ ಸರ್ಕಾರ ಅಂತಾರಲ್ಲ ಅಲ್ಲಿ ಗಂಡಸ್ತನ ತೋರಿಸಲಿ. ಪ್ರಧಾನಮಂತ್ರಿಗೂ ಆಹ್ವಾನ ಮಾಡಲಿ. ನಾನೇ ಎಲ್ಲಾ ರೀತಿಯ ಗೌರವ ಕೊಡ್ತೇನೆ. ಗಂಡಸರಾದವರು ಗಂಡಸ್ತನದ ಬಗ್ಗೆ ಚೆಕ್ ಮಾಡಲ್ಲ. ಬೇರೆಯವರು ಚೆಕ್ ಮಾಡ್ತಾರೆ, ಅದು ಬಿಜೆಪಿಯಲ್ಲಿ ಜಾಸ್ತಿ. ಅವರು ಏನ್ ಮಾಡ್ತಾರೆ ಅಂತ ಕಾಯ್ದಿದ್ದೀನಿ ನಾನು. ನಾವು ಹೆದರಿಕೊಂಡು ಹೋಗಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸಚಿವ ಅಶ್ವಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES