Thursday, December 19, 2024

ಬೃಹತ್​​ ಗಾತ್ರದ ಕಾಳಿಂಗ ಸೆರೆ

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಹಚ್ಚಹಸುರಿನ ಮಲೆನಾಡಿನ ಚಿತ್ರಣ ಹಾದುಹೋಗುತ್ತದೆ. ಬಯಲುಸೀಮೆಯ ಜನರಿಗೆ ಮಲೆನಾಡಿನ ಹಸಿರೆಂದರೆ ಮನಸಿಗೆ ಒಂದು ರೀತಿಯ ಮುದ. ಆದರೆ ಮಲೆನಾಡಿನಲ್ಲಿ ಹಸಿರಿನ ಜೊತೆಗೆ ಕಾಡುಪ್ರಾಣಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಈಗ ಈ ಪೀಠಿಕೆ ಏಕೆಂದರೆ ಹಾಸನದ ತೋಟವೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ 11 ಅಡಿ ಉದ್ದದ ಕಾಳಿಂಗ ಕಾಣಿಸಿಕೊಂಡಿದೆ. ಕುಂಬರಡಿ ಗ್ರಾಮದ ನಿಂಗಪ್ಪ ಎಂಬುವರ ಕಾಫಿ ತೋಟದಲ್ಲಿ ಸರ್ಪ ಕಾಣಿಸಿಕೊಂಡು ಸ್ಥಳೀಯರ ಅತಂಕ್ಕೆ ಕಾರಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗತಜ್ಞ ಸಗೀರ್ ಕಾಳಿಂಗವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

RELATED ARTICLES

Related Articles

TRENDING ARTICLES