Sunday, January 19, 2025

ದೇಶದ 2ನೇ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ ಅವರ 56ನೇ ಪುಣ್ಯತಿಥಿ

ಇಂದು ಭಾರತದ ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ ಅವರ 56ನೇ ಪುಣ್ಯತಿಥಿಯಾಗಿದೆ. ಅವರು1966ರ ಜನವರಿ 11ರಂದು ಉಜ್ಬೆಕಿಸ್ತಾನ​​ದ ತಾಷ್ಕೆಂಟ್​​ನಲ್ಲಿ ನಿಧನರಾಗಿದ್ರು. ರಾಜಕೀಯ ಜೀವನದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಅವರು, ಜವಾಹರ್​ ಲಾಲ್​ ನೆಹರೂ ಬಳಿಕ ದೇಶದ 2ನೇ ಪ್ರಧಾನಿಯಾದವರು.

ಲಾಲ್​ ಬಹದ್ದೂರ್​ ಶಾಸ್ತ್ರಿ ಹುಟ್ಟಿದ್ದು 1904ರ ಅಕ್ಟೋಬರ್​ 2ರಂದು ಜನಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದೇ ಅವರ ಹುಟ್ಟುಹಬ್ಬವನ್ನೂ ದೇಶಾದ್ಯಂತ ಆಚರಿಸಲಾಗುತ್ತದೆ. ಗಾಂಧಿ ಹುಟ್ಟಿ 35ವರ್ಷಗಳ ಬಳಿಕ ಜನಿಸಿದ ಶಾಸ್ತ್ರಿ, ನಂತರದ ದಿನಗಳಲ್ಲಿ ಮಹಾತ್ಮ ಗಾಂಧಿಯವರ ಕಟ್ಟಾ ಅನುಯಾಯಿ ಆದರು.

ರಾಜಕೀಯ ಜೀವನದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಅವರು, 1964ರ ಜೂನ್​​ನಿಂದ 1966ರ ಜನವರಿ ವರೆಗೆ ದೇಶದ ಪ್ರಧಾನಿಯಾಗಿದ್ದರು. ಭಾರತದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜೈ ಜವಾನ್​, ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಹು ನೀಡಿದವರು. ಆದರೆ ಇವರ ಸಾವಿನ ಸುತ್ತ ಇರುವ ಅನುಮಾನಗಳು ಮಾತ್ರ ಇಂದಿಗೂ ಬಗೆಹರಿದಿಲ್ಲ.

ಸರಳತೆ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಇವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಹೀಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು ಇವರಾಗಿದ್ದಾರೆ.

RELATED ARTICLES

Related Articles

TRENDING ARTICLES