Wednesday, January 22, 2025

ಇಂದಿನಿಂದ ಭಾರತ ದಕ್ಷಿಣ ಆಫ್ರಿಕ 3ನೇ ಟೆಸ್ಟ್

ಕೇಪ್​ಟೌನ್ (ದಕ್ಷಿಣ ಆಫ್ರಿಕ): ದಕ್ಷಿಣ ಆಫ್ರಿಕಾದಲ್ಲಿ ಇಂದಿನಿಂದ ಸರಣಿಯ ಮೂರನೆಯ ಹಾಗೂ ಕೊನೆಯ ಟೆಸ್ಟ್ ಪಂದ್ಯ ಭಾರತ ಹಾಗೂ ದಕ್ಷಿಣ ಆಫ್ರಿಕಾಗಳ ಮಧ್ಯೆ ಪ್ರಾರಂಭವಾಗಿದೆ. ಮೊದಲ ಎರಡು ಟೆಸ್ಟ್​ಗಳಲ್ಲಿ ಒಂದೊಂದು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿರುವ ತಂಡಗಳು ಈ ಪಂದ್ಯವನ್ನು ಗೆಲ್ಲಲು ಶತಾಯಗತಾಯ ಪ್ರಯತ್ನಿಸಲಿವೆ.

ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದೆ. ಆರಂಭಿಕ ಜೋಡಿಗಳಾಗಿ ಕರ್ನಾಟಕದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್​ವಾಲ್ ಕಣಕ್ಕೆ ಇಳಿದಿದ್ದಾರೆ. 6 ಓವರ್​ಗಳಲ್ಲಿ 20 ರನ್ ಗಳಿಸಿರುವ ಭಾರತ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು ದಕ್ಷಿಣ ಆಫ್ರಿಕಾದ ಮೇಲೆ ಒತ್ತಡ ಹೇರಲು ಇಂದು ಇಡೀ ದಿನ ವಿಕೆಟ್ ಕಳೆದುಕೊಳ್ಳದೆ ಬ್ಯಾಟಿಂಗ್ ಮಾಡಬೇಕಾಗಿದೆ.

RELATED ARTICLES

Related Articles

TRENDING ARTICLES