ಬೆಳಗಾವಿ : ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಜಾಸ್ತಿಯಾಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ಮಹರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್ ಷೋಷಿಸಲಾಗಿದೆ.
ಬೆಳಗಾವಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಿಂದಾಗಿ ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ ಮಾಡಲಾಗಿದೆ. ಹೀಗಾಗಿ ಗೋವಾ ಗಡಿಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಇಷ್ಟು ದಿನ ಡಬಲ್ ಡೋಸ್ ವಾಕ್ಸಿನೇಷನ್ ಆದವರಿಗೆ ಪ್ರವೇಶ ಇತ್ತು, ಆದರೆ RTPCR ನೆಗೆಟಿವ್ ರಿಪೋರ್ಟ್ ಇಲ್ಲದೇ ಬೆಳಗಾವಿಗೆ ಪ್ರವೇಶವಿಲ್ಲ, ಹೀಗಾಗಿ ಜಿಲ್ಲೆಯ 23 ಚೆಕ್ ಪೋಸ್ಟ್ ಗಳಲ್ಲಿ ಪೋಲಿಸ್, ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತೀವ್ರ ತಪಾಸಣೆಯನ್ನು ಮಾಡುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ 634 ಆಕ್ಟಿವ್ ಕೇಸ್ ಪತ್ತೆಯಾಗಿದ್ದು,ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ 1 ರಿಂದ 9 ನೇ ತರಗತಿವರೆಗೆ ಶಾಲೆ ಬಂದ್ ಮಾಡಲಾಗಿದೆ.