ರಾಮನಗರ : ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಾ, ಲಂಚ ಪಡೆದಿದ್ದೀನಾ? ಆದರೂ ನನ್ನನ್ನು ಜೈಲಿಗೆ ಹಾಕಿದ್ರಿ. ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದೀರಾ. ನಿಮಗೆ ಒಳ್ಳೆಯದಾಗಲ್ಲ. ನಿಮಗೆ ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.
ಎರಡನೇ ದಿನ ಪಾದಯಾತ್ರೆ ಮುಗಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗ್ಗೆಯಿಂದ ನನ್ನ ನಡು ಬೆನ್ನು ಎಲ್ಲಾ ಮುರಿದು ಹಾಕಿದ್ದೀರಿ. ಈಗ ನಾನು ಡಾಕ್ಟರ್ ಕರೆದುಕೊಂಡು ರೆಡಿ ಮಾಡಿಸಿಕೊಳ್ಳಬೇಕು. ನನಗೆ ಇವತ್ತು ದುಃಖದ ದಿನ. ಬಿಜೆಪಿ ಸರ್ಕಾರದ ಮಂತ್ರಿಗಳು ನೀಚ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿರಲಿಲ್ಲ. ನಿನ್ನೆ ದೊಡ್ಡ ಆಲಹಳ್ಳಿಯಲ್ಲಿ ನಮ್ಮ ಜನ ನನಗೆ ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಕನಕಪುರದಲ್ಲಿದ್ದ ಬಿಲ್ಡಿಂಗ್‍ನಲ್ಲಿ ಲೈಟ್ ಹಾಕಲು ಜನರಿಗೆ ಸರ್ಕಾರ ಅವಕಾಶ ನೀಡಲಿಲ್ಲ. ಇದು ಅಲ್ಲಿನ ಜನರಿಗೆ ಅವಮಾನವಾಗಿದೆ ಎಂದರು.