Thursday, January 23, 2025

ಬೈಟು ಲವ್ ರಿಲೀಸ್​ಗೂ ಮೊದ್ಲೇ ಮತ್ತೊಂದು ಸ್ವೀಟ್ ನ್ಯೂಸ್

ಸ್ಯಾಂಡಲ್​ವುಡ್ ನಟ ಶೋಕ್​ದಾರ್ ಧನ್ವೀರ್​​ ಮೊದಲ ಸಿನಿಮಾದಲ್ಲೇ ಮೋಡಿ ಮಾಡಿದ್ರು. ತಮ್ಮದೇ ಸ್ಟೈಲ್ ಆ್ಯಕ್ಟಿಂಗ್ ಮೂಲಕ ತೆರೆ ಮೇಲೆ ಮಿಂಚಿದ ನಟ ಧನ್ವೀರ್​ಗೆ ಅವ್ರದ್ದೇ ಆದ ಫ್ಯಾನ್ಸ್​ ಫಾಲೋವರ್ಸ್​ ಕೂಡ ಇದ್ದಾರೆ. ಅವ್ರ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳೆಲ್ಲ ಕಾಯುತ್ತಿರುವಾಗಲೇ ಶೋಕ್​ದಾರ್​ ಸಂಕ್ರಾಂತಿ ವಿಶೇಷತೆಯಲ್ಲಿ ಸಿಹಿ ಸುದ್ದಿ ಕೊಡಲು ಬರ್ತಿದ್ದಾರೆ.

ಸ್ಯಾಂಡಲ್​ವುಡ್​​ನಲ್ಲಿ ತಮ್ಮದೇ ಸ್ಟೈಲ್ ಆ್ಯಕ್ಟಿಂಗ್, ಬಾಡಿ ಲ್ಯಾಂಗ್ವೇಜ್ ಮೂಲಕ ತೆರೆ ಮೇಲೆ ಮಿಂಚಿ ಶೋಕ್​ದಾರ್​ ಅನ್ನೋ ಪಟ್ಟವನ್ನು ಪಡೆದು ಮಿಂಚುತ್ತಿರೋ ನಟ ಧನ್ವೀರ್. ಬಜಾರ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಧನ್ವೀರ್ ಮೊದಲ ಚಿತ್ರದಲ್ಲೇ ಸೂಪರ್ ಸಕ್ಸಸ್ ಕಂಡ್ರು. ಆ ಚಿತ್ರ ಸಕ್ಸಸ್ ಆಗಿದ್ದಷ್ಟೇ ಅಲ್ಲದೆ ಧನ್ವೀರ್​ ಸಿನಿ ಜರ್ನಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿತ್ತು. ಕೇವಲ ಒಂದೇ ಚಿತ್ರದಲ್ಲಿ ಧನ್ವೀರ್ ಭಾರೀ ಜನಪ್ರಿಯತೆ ಗಳಿಸಿದ್ರು.

ಸಾಮಾನ್ಯವಾಗಿ ಯಾವುದೇ ನಟನಿಗೆ ತಮ್ಮ ಮೊದಲ ಸಿನಿಮಾದಲ್ಲೇ ಯಶಸ್ಸು, ಜನಪ್ರಿಯತೆ ಸಿಕ್ಕೋದು ವಿರಳ. ಆದ್ರೆ ಆ ಮಾತಿಗೆ ಧನ್ವೀರ್ ತದ್ವಿರುದ್ಧ ಅನ್ನಬುಹುದು. ಬಜಾರ್ ನಂತ್ರ ಇದೀಗ ಧನ್ವೀರ್ ಅಂಡ್ ಶ್ರೀಲೀಲಾ ಕಾಂಬಿನೇಶನ್​ನ ಬೈಟು ಲವ್ ಸಿನಿಮಾ ಮೂಡಿಬರ್ತಿದೆ. ಈ ಚಿತ್ರ ಈಗಾಗ್ಲೇ ಸ್ಯಾಂಪಲ್ಸ್ ಮೂಲವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಬಜಾರ್ ಚಿತ್ರದಲ್ಲಿ ಧನ್ವೀರ್ ಅವ್ರ ಅದ್ಭುತ ನಟನೆ, ಪವರ್​​ಫುಲ್ ಆಕ್ಷನ್ ನೋಡಿ ದಂಗಾಗಿದ್ದ ಸಿನಿಪ್ರಿಯರು ಅವ್ರ ಮುಂದಿನ ಚಿತ್ರ ಬೈಟು ಲವ್ ಸಿನಿಮಾ ಬಗ್ಗೆಯೂ ಭಾರೀ ಕುತೂಹಲದಿಂದ ಎದುರು ನೋಡ್ತಿದ್ದಾರೆ. ಆದ್ರೆ ಧನ್ವೀರ್ ತಮ್ಮ ನಟನೆಯ ಎರಡನೇ ಸಿನಿಮಾ ಬಿಡುಗಡೆಗೂ ಮೊದ್ಲೇ ಇದೀಗ ಸಂಕ್ರಾಂತಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್​ ಕೊಡಲು ಸಜ್ಜಾಗಿದ್ದಾರೆ.

ನಟ ಧನ್ವೀರ್ ತಮ್ಮ ಬೈಟು ಲವ್ ಚಿತ್ರ ತೆರೆ ಕಾಣೊ ಮುನ್ನವೇ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಂದಹಾಗೆ ಕನ್ನಡ ಹಾಗೂ ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರೋ ಶಂಕರ್ ರಾಮನ್ ಇದೀಗ ಧನ್ವೀರ್ ಅವ್ರ ಮೂರನೇ ಚಿತ್ರಕ್ಕೆ ಌಕ್ಷನ್ ಕಟ್ ಹೇಳೋ ಮೂಲಕ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. ಚಿತ್ರರಂಗದಲ್ಲಿ ತಮ್ಮ 13 ವರ್ಷದ ಅನುಭವದ ಆಧಾರದ ಮೇಲೆ ಧನ್ವೀರ್​ಗಾಗಿ ಒಂದೊಳ್ಳೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಇದೊಂದು ಮಾಫಿಯ ಲೋಕದ ಕಥೆ ಹಾಗೂ ಆ್ಯಕ್ಷನ್ ಎಂಟರ್​ಟೈನರ್ ಸಿನಿಮಾ ಆಗಿರಲಿದೆ. ಈ ಚಿತ್ರಕ್ಕೆ ಚೇತನ್ ಕುಮಾರ್ ಬಂಡವಾಳ ಹೂಡಲಿದ್ದು, ಈಕ್ವಿನಾನ್ಸ್​ ಗ್ಲೋಬಲ್ ಎಂಟರ್​ಟೈನ್ಮೆಂಟ್ ಪ್ರೊಡಕ್ಷನ್​ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ಎಳ್ಳು, ಬೆಲ್ಲ ಮೆಲ್ಲುವ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ನಟ ಧನ್ವೀರ್ ಅವ್ರ ಮುಂದಿನ ಚಿತ್ರದ ಟೈಟಲ್​ ಹಾಗೂ ಫಸ್ಟ್​ ಲುಕ್ ಪೋಸ್ಟರ್​ ರಿವೀಲ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ವಿಚಾರವನ್ನು ಸ್ವತಃ ನಟ ಧನ್ವೀರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೀಗಾಗಿ ಧನ್ವೀರ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲಗಳು ಗರಿಗೆದರಿವೆ.

ಒಟ್ಟಾರೆ ಬೈಟು ಲವ್ ಚಿತ್ರವನ್ನು ಕಣ್ತುಂಬಿಕೊಳ್ಳೋ ಮೊದ್ಲೇ ಶೋಕ್​ದಾರ್ ಧನ್ವೀರ್ ಅಭಿಮಾನಿಗಳಿಗೆ ಅವ್ರ ಮುಂದಿನ ಸಿನಿಮಾ ಕುರಿತು ಸಿಹಿ ಸುದ್ದಿ ಸಿಕ್ತಿದೆ. ಈ ವಿಷ್ಯ ಕೇಳಿ ಧನ್ವೀರ್ ಫ್ಯಾನ್ಸ್ ಸದ್ಯ ಫುಲ್ ಖುಷಿಯಾಗಿದ್ದಾರೆ.

RELATED ARTICLES

Related Articles

TRENDING ARTICLES