Sunday, December 22, 2024

ದೆಹಲಿ ಪಾಸಿಟಿವಿಟಿ ರೇಟ್ 25%; ಆದರೂ ಲಾಕ್​ಡೌನ್ ಇಲ್ಲ ಎಂದ ಕೇಜ್ರಿ

ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಮತ್ತೆ ಲಾಕ್​ಡೌನ್ ಜಾರಿ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.  ದೆಹಲಿಯಲ್ಲಿ ಕಳೆದ ಏಳು ತಿಂಗಳಲ್ಲಿಯೇ ಶೇಕಡ 25 ರಷ್ಟು ಅತಿ ಹೆಚ್ಚಿನ ಪಾಸಿಟಿವಿಟಿ ರೇಟ್ ಬಂದಿದ್ದರೂ ಸಹ ಕೇಜ್ರಿವಾಲ್ ಬಡನಾಗರಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಯಾವುದೇ ಕಾರಣಕ್ಕೂ ಮತ್ತೆ ಲಾಕ್​ಡೌನ್ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಒಂದೇ ದಿನ 22000 ಸಾವಿರ ಕೊರೋನ ಪ್ರಕರಣಗಳು ವರದಿಯಾಗಿವೆ. ಅರವಿಂದ್ ಕೇಜ್ರಿವಾಲ್ ಕೋವಿಡ್ ಚಿಕಿತ್ಸೆಯನ್ನು ನೀಡುತ್ತಿರುವ ಅತ್ಯುನ್ನತ ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ. ದೆಹಲಿಯನ್ನು ಲಾಕ್​ಡೌನ್ ಮಾಡದಿದ್ದರೂ ನೈಟ್​ಕರ್ಫ್ಯೂ ಮಾತ್ರ ಮುಂದುವರೆಯುವುದು ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES