Monday, December 23, 2024

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಡಲಿದ್ದಾರೆ ಅನೀಶ್

ಸ್ಯಾಂಡಲ್​ವುಡ್​​ ಯಂಗ್ ಅಂಡ್ ಹ್ಯಾಂಡ್ಸಮ್ ನಟ ಅನೀಶ್ ತೇಜೇಶ್ವರ್. ಕಳೆದ ವರ್ಷ ರಾಮಾರ್ಜುನನಾಗಿ ತೆರೆ ಮೇಲೆ ಕಮಾಲ್ ಮಾಡಿದ್ರು. ಇನ್ನೇನು ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡೋಕೆ ರೆಡಿಯಾಗಿರೋ ನಟ ಅನೀಶ್, ತಮ್ಮ ಬರ್ತ್​ಡೇ ವಿಶೇಷತೆಯಲ್ಲಿ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್​ ಕೊಡೋಕೆ ಸಜ್ಜಾಗಿದ್ದಾರೆ.
ನಮ್ ಏರಿಯಾದಲ್ ಒಂದ್ ದಿನ ಅನ್ನೋ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟು ಭರವಸೆಯ ನಟನಾಗಿ ಹೊರಹೊಮ್ಮಿದ ನಟ ಅನೀಶ್ ತೇಜೇಶ್ವರ್. ಆ ನಂತ್ರ ಬಹಳಷ್ಟು ಸಿನಿಮಾಗಳಲ್ಲಿ ಡಿಫರೆಂಟ್, ಡಿಫರೆಂಟ್ ರೋಲ್ಸ್​ನಲ್ಲಿ ಅಭಿನಯಿಸಿದ್ರು. ಕ್ಲಾಸ್ ಹಾಗೂ ಮಾಸ್ ಎರಡೂ ರೀತಿಯ ಪಾತ್ರಗಳಲ್ಲೂ ಸೈ ಅನ್ನಿಸಿಕೊಂಡಿದ್ದಾರೆ.

ಕಳೆದ ವರ್ಷ ತೆರೆಕಂಡ ಅನೀಶ್ ನಟನೆಯ ರಾಮಾರ್ಜುನ ಸಿನಿಮಾ ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತು. ರಾಮಾರ್ಜುನ ಚಿತ್ರದ ಬಳಿಕ ಅನೀಶ್ ಕೈಯಲ್ಲಿ ಸದ್ಯ ಮಾಂಜಾ, ಎನ್​ಆರ್​​ಐ​ ಸೇರಿದಂತೆ ಹಲವಾರು ಸಿನಿಮಾಗಳಿವೆ.

ಅಂದ ಹಾಗೆ ಜನವರಿ 12ರಂದು ನಟ ಅನೀಶ್ ತೇಜೇಶ್ವರ್ ಅವ್ರ ಹುಟ್ಟುಹಬ್ಬ. ತಮ್ಮ ಬರ್ತ್​ಡೇ ವಿಶೇಷತೆಯಲ್ಲಿ ಅನೀಶ್ ತಮ್ಮ ಮುಂದಿನ ಚಿತ್ರವನ್ನ ಅನೌನ್ಸ್ ಮಾಡಲಿದ್ದಾರೆ. ಈ ಸುದ್ದಿಯನ್ನು ನಟ ಅನೀಶ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅನೀಶ್ ಮುಂದಿನ ಚಿತ್ರಕ್ಕೆ ನಿರ್ದೇಶಕ ಶಾನ್ ಆಕ್ಷನ್ ಕಟ್ ಹೇಳಿದ್ದಾರೆ.​​ ಇದು ಅವ್ರ ಡೈರೆಕ್ಷನ್​ನ ಮೊದಲ ಸಿನಿಮಾ. ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಸಬ್ಜೆಕ್ಟ್​ ಚಿತ್ರ ಅನ್ನಲಾಗ್ತಿದೆ.

ಅಂದಹಾಗೆ ಈಗಾಗ್ಲೇ ಈ ಚಿತ್ರದ ಮಾತಿನ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಹಾಡುಗಳ ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ಯಂತೆ. ರೈಡರ್ ಸಿನಿಮಾದಲ್ಲಿ ನಟಿಸಿದ್ದ ನಟಿ ಸಂಪದ ಹುಲಿವಾನ ಅನೀಶ್ ನೆಕ್ಸ್ಟ್ ವೆಂಚರ್​ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್ ಹಾಗೂ ಉಗ್ರಂ ಮಂಜು ಕೂಡ ಚಿತ್ರದ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಒಟ್ಟಾರೆ ನಟ ಅನೀಶ್ ತೇಜೇಶ್ವರ್ ಈ ಬಾರಿಯ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮುಂದಿನ ಸಿನಿಮಾದ ಟೈಟಲ್ ಘೋಷಿಸಲಿದ್ದು, ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಡಲಿದ್ದಾರೆ. ಈ ವಿಷ್ಯ ತಿಳಿದು ಸದ್ಯ ಅನೀಶ್ ಅವ್ರ ಅಭಿಮಾನಿಗಳು ಸಂತಸದಲ್ಲಿದ್ದಾರೆ.

RELATED ARTICLES

Related Articles

TRENDING ARTICLES