Wednesday, January 22, 2025

ತಾಲಿಬಾನ್ ಆಡಳಿತದಲ್ಲಿ ಸರ್ಕಾರಿ ಹುದ್ದೆಗೆ ಕರೆ; ಮಹಿಳೆಯರಿಗಿಲ್ಲ ಅವಕಾಶ

ಕಾಬೂಲ್ (ಅಫಘಾನಿಸ್ತಾನ್): ಅಫಘಾನಿಸ್ತಾನ್​ದಲ್ಲಿ ಕಳೆದ ವರ್ಷ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಅಲ್ಲಿ ಮಹಿಳೆಯರ ಎಲ್ಲ ಹಕ್ಕುಗಳನ್ನು ಕಿತ್ತುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವಂತೆ ತಾಲೀಬಾನ್ ಸರ್ಕಾರಿ ಹುದ್ದೆಗೆ ಅಲ್ಲಿನ ಜನರಿಂದ ಅರ್ಜಿ ಆಹ್ವಾನಿಸಿದೆ. ಆದರೆ ಈ ಅರ್ಜಿಯನ್ನು ಮಹಿಳೆಯರು ಸಲ್ಲಿಸುವಂತಿಲ್ಲವೆಂದು ತಾಲೀಬಾನ್ ಸರ್ಕಾರ ಸೂಚಿಸಿದೆ.

ಇಸ್ಲಾಮಿಕ್ ಎಮಿರೆಟ್ಸ್​ನ ಆಡಳಿತ ಸುಧಾರಣಾ ಸಮೀತಿಯ ಪ್ರಕಾರ ನಾಗರಿಕ ಹುದ್ದೆಗೆ ಕೇವಲ ಪುರುಷರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದಿದೆ ಎಂದು ಅಫಘಾನಿಸ್ತಾನದ ಖಾಮಾ ಪ್ರೆಸ್ ವರದಿ ಮಾಡಿದೆ.

RELATED ARTICLES

Related Articles

TRENDING ARTICLES