Wednesday, January 22, 2025

ನ್ಯೂಜಿಲೆಂಡ್ ಆಟಗಾರನ ವಿಶ್ವದಾಖಲೆ

ನ್ಯೂಜಿಲೆಂಡ್ ಸ್ಟಾರ್ ಕ್ರಿಕೆಟ್ ಆಟಗಾರ ಡೆವೊನ್ ಕಾನ್ವೆ ಒಂದು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರು ತಾವು ಆಡಿದ ಮೊದಲ ಐದು ಟೆಸ್ಟ್​ಗಳಲ್ಲಿ ಸತತ ಐದು 50+ ರನ್​ಗಳನ್ನು ಗಳಿಸಿದ ಮೊದಲ ಆಟಗಾರನೆಂದು ಈ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಅರ್ಧಶತಕವನ್ನು ಗಳಿಸುತ್ತಿದ್ದಂತೆಯೇ ಕಾನ್ವೆ ಈ ವಿಶ್ವದಾಖಲೆ ನಿರ್ಮಿಸಿದರು. ಕಾನ್ವೆ ಈ ವರೆಗೆ ಕೇವಲ 5 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ಈ ಪಂದ್ಯಗಳಲ್ಲಿ 2 ಸೆಂಚೂರಿ ಹಾಗೂ 3 ಬಾರಿ 50+ ಸ್ಕೋರ್ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ 2ನೆಯ ಟೆಸ್ಟ್​ನಲ್ಲಿ 122 ರನ್ ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES