ಮಂಡ್ಯ : ಜಿಲ್ಲೆಯಲ್ಲಿ ಈವರೆಗೆ 60 ಶಾಲಾ ಮಕ್ಕಳಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಡಿಡಿಪಿಐ ಜವರೇಗೌಡ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲೂ ಮಕ್ಕಳಿಗೆ ಸೋಂಕು ಹೆಚ್ಚಾಗಿದ್ದು,ಬೆಳಗೊಳ ಹೈಸ್ಕೂಲಿನಲ್ಲಿ 13, ನೇರಳಕರೆ ಶಾಲೆಯ 1, ಅರಕೆರೆ ಶಾಲೆಯ 1, ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ಹಾಸ್ಟೆಲ್ ನ 12, ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಓರ್ವ ವಿದ್ಯಾರ್ಥಿಗೆ ಸೋಂಕು ಪತ್ತೆಯಾಗಿದೆ.
ಕಡ್ಡಾಯವಾಗಿ SOP ಪಾಲನೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭೌತಿಕ ತರಗತಿಗಳು ನಡೆಯುತ್ತಿವೆ,ಆರೋಗ್ಯ ಇಲಾಖೆಗೆ ಸಹಕಾರ ಕೊಟ್ಟಿದ್ದೇವೆ. ಮಕ್ಕಳಲ್ಲಿ ಸೋಂಕು ಪತ್ತೆ ಹಿನ್ನಲೆ ಪೋಷಕರಿಗೂ ಕೊವಿಡ್ ಟೆಸ್ಟ್ ಮಾಡಲಾಗುತ್ತದೆ,ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ, ಎಚ್ಚರಿಕೆ ವಹಿಸಿ ಎಂದರು.
ಮಕ್ಕಳಲ್ಲಿ ಸೋಂಕು ಹೆಚ್ಚಾದರೆ ಶಾಲೆ ಮುಚ್ಚುವುದರ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸುತ್ತದೆ. ಶಾಲೆಗಳಲ್ಲಿ ಕಡ್ಡಾಯ ಕೊವಿಡ್ ನಿಯಮಕ್ಕೆ ಸೂಚನೆ ನೀಡಲಾಗಿದೆ.ತಮಿಳುನಾಡಿನ ಓಂ ಶಕ್ತಿಗೆ ಹೋಗಿ ಬಂದವರಿಂದ ಮಕ್ಕಳಿಗೆ ಸೋಂಕು ಪತ್ತೆಯಾಗಿದ್ದು, ಪೋಷಕರು ಓಂ ಶಕ್ತಿಗೆ ಹೋಗಿದ್ದರಿಂದ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ,ಶಾಲೆಯನ್ನು ಸೀಲ್ ಡೌನ್ ಮಾಡಿ ಮಕ್ಕಳನ್ನ ಕ್ವಾರೆಂಟೀನ್ ಮಾಡಲಾಗಿದೆ.ಕಡ್ಡಾಯವಾಗಿ ಕೊರೋನಾ ನಿಯಮ ಪಾಲನೆ ಮಾಡುವಂತೆ ಡಿಡಿಪಿಐ ಮನವಿಯನ್ನು ಮಾಡಿದ್ದಾರೆ.